ಸಿದ್ಧಗಂಗಾ ಫಾರ್ಮಸಿ ಕಾಲೇಜಿನಲ್ಲಿ ವಿಶ್ವ ಔಷಧಿಕಾರರ ದಿನಾಚರಣೆ
Tumkurnews
ತುಮಕೂರು: ನಗರದ ಶ್ರೀ ಸಿದ್ಧಗಂಗಾ ಫಾರ್ಮಸಿ ಕಾಲೇಜಿನಲ್ಲಿ ವಿಶ್ವ ಔಷಧಿಕಾರರ ದಿನಾಚರಣೆಯನ್ನು ಮೂರು ವಿಭಿನ್ನ ಮಾದರಿಯಲ್ಲಿ ಆಚರಿಸಲಾಯಿತು. ಮೊದಲಿಗೆ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೀಲಿಮಾ ಕೊಟ್ಟನ್ ಔಷಧ ನಿಯಂತ್ರಕರು-1,ತುಮಕೂರು ವೃತ್ತ. ಇವರು ಆಗಮಿಸಿದ್ದರು. ಇವರು ಔಷಧಗಳ ಮಾರುಕಟ್ಟೆ ಮತ್ತು ಅವಕಾಶಗಳ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಕೊಟ್ಟರು. ಕಾರ್ಯಕ್ರಮದಲ್ಲಿ ಔಷಧೀಕಾರರಾಗಿ ಸೇವೆ ಸಲ್ಲಿಸಿದ ಮೂವರು ಫಾರ್ಮಸಿಸ್ಟ್‍ಗಳಾದ ಪಂಡಿತ್ ಜವಾಹರ್, ರಮೇಶ್ ಎನ್.ಎ ಮತ್ತು ಗಂಗಾಧರ ಗಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಶಿವಕುಮಾರಯ್ಯ, ಜಂಟಿ ಕಾರ್ಯದರ್ಶಿ, ಎಸ್.ಎಸ್.ಇ.ಎಸ್ ವಹಿಸಿದ್ದರು, ಹಾಗೂ ಕಾರ್ಯಕ್ರಮದಲ್ಲಿ ಡಾ.ಸುರೇಶ್ ವಿ ಕುಲಕರ್ಣಿ, ಪ್ರಾಂಶುಪಾಲರು, ಕಾಲೇಜಿನ ವಿಧ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. ನಂತರ ಸಾರ್ವಜನಿಕರಿಗೋಸ್ಕರ ಜಾಗೃತಿ ರ್ಯಾಲಿ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.




+ There are no comments
Add yours