ತುಮಕೂರು ನಗರದಲ್ಲಿ ತಂಪೆರೆದ ಮಳೆ
Tumkurnews
ತುಮಕೂರು: ನಗರದಲ್ಲಿ ಶನಿವಾರ ಸಂಜೆ ಭರ್ಜರಿ ಮಳೆಯಾಗಿದ್ದು, ಹಲವು ರಸ್ತೆಗಳು ಜಲಾವೃತಗೊಂಡವು.
ಇಲ್ಲಿನ ಕುಣಿಗಲ್ ರಸ್ತೆಯ ಹೇಮಾವತಿ ಕಚೇರಿ ಮುಂಭಾಗ ರಸ್ತೆಯಲ್ಲಿ ಮಳೆ ನೀರು ತುಂಬಿದ ಪರಿಣಾಮವಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಯಿತ್ತು. ಇಸ್ರೋ ಶಾದಿಮಹಲ್ ಮುಂಭಾಗದ ರಸ್ತೆಯಲ್ಲೂ ಮಳೆ ನೀರು ತುಂಬಿ ಹರಿದು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಿತ್ತು.
ಚಿತ್ರ: ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿ ಶನಿವಾರ ಕಂಡು ಬಂದ ದೃಶ್ಯ
ಚಿತ್ರ ಕೃಪೆ: ತೊರೆಮಾವಿನಹಳ್ಳಿ ಸುರೇಶ್
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours