ಲೋಕಾಯುಕ್ತ ದಾಳಿ; ಲಂಚ ಸಮೇತ ಸಿಕ್ಕಿಬಿದ್ದ ಜೈಲು ಅಧೀಕ್ಷಕ

1 min read

 

ಮುಂದುವರಿದ ಭ್ರಷ್ಟರ ಬೇಟೆ; ಮತ್ತೋರ್ವ ಅಧಿಕಾರಿ ಲೋಕಾ ಬಲೆಗೆ

Tumkurnews
ಮಧುಗಿರಿ: ಪ್ರಕರಣವೊಂದರಲ್ಲಿ ವಿಚಾರಣಾಧಿನ ಖೈದಿಯಾಗಿ ಜೈಲಿನಲ್ಲಿದ್ದ ವ್ಯಕ್ತಿಯನ್ನು
ಮಾತನಾಡಿಸಲು 10,000 ರೂ. ಲಂಚಕ್ಕೆ ಬೇಡಿಕೆ ಇಟ್ಟು 5,000 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಜೈಲು ಅಧೀಕ್ಷಕ ಸಿಕ್ಕಿಬಿದ್ದಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ.
ಮಧುಗಿರಿ ಜೈಲು ಅಧೀಕ್ಷಕ ದೇವೇಂದ್ರ ಆರ್ ಕೋಣಿ ಎಂಬುವರೇ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಅಧೀಕ್ಷಕ.

ಲಂಚ ಸ್ವೀಕಾರ: ಕೊರಟಗೆರೆ ಬೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ
ಶಿರಾ ವಾಸಿ ಅರ್ಬಾಜ್ ಎಂಬಾತ ಐಪಿಸಿ 307ರಿತ್ಯ ದಾಖಲಾದ ಪ್ರಕರಣದಲ್ಲಿ ಮಧುಗಿರಿ ಜೈಲಿನಲ್ಲಿದ್ದರು. ಆಗಿಂದಾಗೆ ಅವರನ್ನು ನೋಡಲು ಮನೆಯವರು ಬರುತ್ತಿದ್ದರು. ಬಂದಾಗಲೆಲ್ಲ ರೂ.1500 ರಿಂದ 2,000 ಲಂಚವನ್ನು ಅಧೀಕ್ಷಕರು ಪೀಕುತ್ತಿದ್ದರು ಎನ್ನಲಾಗಿದೆ. ಲಂಚ ಕೊಡದಿದ್ದರೆ ಖೈದಿಯನ್ನು ತುಮಕೂರು ಜೈಲಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದರು ಎನ್ನಲಾಗಿದೆ. ಇಂದು ಖೈದಿಯನ್ನು ಭೇಟಿ ಮಾಡಲು ಬಂದ ಸಂಬಂಧಿಕರಿಂದ ಎಂದಿನಂತೆ 5 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. ಲೋಕಾಯುಕ್ತ ಎಸ್.ಪಿ ವಲಿ ಭಾಷಾ ನೇತೃತ್ವದಲ್ಲಿ ಡಿವೈಎಸ್ಪಿಗಳಾದ ಮಂಜುನಾಥ್, ಹರೀಶ್, ಇನ್ಸ್’ಪೆಕ್ಟರ್’ಗಳಾದ ಸತ್ಯನಾರಾಯಣ, ಸಲೀಂ, ರಾಮರೆಡ್ಡಿ, ಶಿವರುದ್ರಪ್ಪ ಮೇಟಿ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ನೀತಿ ಸಂಹಿತೆ ಉಲ್ಲಂಘನೆಯಡಿ ವಶಪಡಿಸಿಕೊಳ್ಳಲಾದ ವಸ್ತುಗಳ ಹರಾಜು

You May Also Like

More From Author

+ There are no comments

Add yours