ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್; ಅರ್ಜಿ ಆಹ್ವಾನ

1 min read

 

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್; ಅರ್ಜಿ ಆಹ್ವಾನ

Tumkurnews.in
ತುಮಕೂರು; ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ಹೆಲಿಕಾಪ್ಟರ್ ವಿಭಾಗವು ಗುಬ್ಬಿ ತಾಲ್ಲೂಕು, ತುಮಕೂರು ಘಟಕದ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

2 ಸಾವಿರ ಉದ್ಯೋಗ, ಈ ಬಾರಿ ಸ್ವಾತಂತ್ರ್ಯ ದಿನ ಹೇಗಿರುತ್ತೆ ಗೊತ್ತೇ? ಜಿಲ್ಲಾಧಿಕಾರಿ
ಈ ನೇಮಕಾತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸಬೇಕಾಗಿರುವುದರಿಂದ ಐ.ಟಿ.ಐ, ಡಿಪ್ಲೋಮಾ ಹಾಗೂ ಯಾವುದೇ ಪದವಿ ಪಾಸಾದ ಅಭ್ಯರ್ಥಿಗಳು (ಬಿ.ಇ./ಬಿ.ಟೆಕ್ ಹೊರತುಪಡಿಸಿ) ಅಗತ್ಯ ದಾಖಲಾತಿಗಳೊಂದಿಗೆ ನಮ್ಮ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು ಹಾಗೂ ಈಗಾಗಲೇ ನೋದಾಯಿತ ಅಭ್ಯರ್ಥಿಗಳಿಗೆ ತಮ್ಮ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಐ.ಡಿ. ಗಳ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಹಾಗೂ ಐ.ಟಿ.ಐ. ಮಾಡಿರುವಂತಹ ಅಭ್ಯರ್ಥಿಗಳು ಎನ್.ಎ.ಸಿ, ಎನ್ ಸಿವಿಟಿ, ಏ.ಟಿ.ಎಸ್.ನ ಪ್ರಮಾಣ ಪತ್ರವನ್ನು ತಮ್ಮ ನೋಂದಾಯಿತ ಎಂಪ್ಲಾಯ್‍ಮೆಂಟ್ ಕಾರ್ಡ್’ಗೆ ಸೇರಿಸುವುದು ಕಡ್ಡಾಯವಾಗಿರುವುದರಿಂದ ಈ ಕೂಡಲೆ ನಮ್ಮ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ. ಹಾಗೂ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0816-2278488 ಇವರಿಗೆ ಸಂಪರ್ಕಿಸಬಹುದಾಗಿದೆ ಎಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ಮುಂದೆ ವಾರದಲ್ಲಿ 2 ದಿನ ಬ್ಯಾಂಕ್ ರಜೆ?!; ಏನಿದು ಸುದ್ದಿ?

About The Author

You May Also Like

More From Author

+ There are no comments

Add yours