Tumkurnews
ತುಮಕೂರು; ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್ ಪಾಟೀಲ ಬಿಡುಗಡೆಗೊಳಿಸಿದ್ದಾರೆ.
ಜನವರಿ 5ರಂದು ಪ್ರಕಟಿಸಲಾಗಿರುವ ಪಟ್ಟಿಯನ್ವಯ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 10,98,754 ಪುರುಷರು, 11,00,722 ಮಹಿಳೆಯರು ಹಾಗೂ 100 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 21,99,576 ಅರ್ಹ ಮತದಾರರಿದ್ದಾರೆ.
ಈ ಪೈಕಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2,15,210, ತಿಪಟೂರು-1,81,379, ತುರುವೇಕೆರೆ-1,79,958, ಕುಣಿಗಲ್-1,93,624, ತುಮಕೂರು ನಗರ-2,48,007, ತಮಕೂರು ಗ್ರಾಮಾಂತರ-2,02,352, ಕೊರಟಗೆರೆ-1,99,960, ಗುಬ್ಬಿ-1,77,467, ಶಿರಾ-2,19,836, ಪಾವಗಡ-1,91,569 ಹಾಗೂ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ 1,90,214 ಮತದಾರರಿದ್ದಾರೆ.
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours