ವಾಹನ ಸಾಲ ಪಡೆಯಲು ಅರ್ಜಿ ಆಹ್ವಾನ
Tumkurnews
ತುಮಕೂರು; ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ನಿಗಮವು ಅನುಷ್ಠಾನಗೊಳಿಸುತ್ತಿರುವ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಐ.ಎಸ್.ಬಿ)-3 (ದ್ವಿ-ಚಕ್ರ/ತ್ರಿಚಕ್ರ ಸರಕು ಸಾಗಾಣಿಕೆ ವಾಹನ) ಸಾಲ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಅವಧಿಯನ್ನು ಡಿ.31ರವರೆಗೆ ವಿಸ್ತರಿಸಲಾಗಿದೆ.
ಅರ್ಜಿದಾರರು ಪರಿಶಿಷ್ಠ ಜಾತಿಯ ಮಾದಿಗ ಮತ್ತು ಸಂಬಂಧಿತ ಜಾತಿಗೆ ಸೇರಿದವರಾಗಿಬೇಕು ಹಾಗೂ ಕರ್ನಾಟಕ ರಾಜ್ಯದ ವಾಸಿಯಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ ರೂ,1,50,000 ಮತ್ತು ನಗರ ಪ್ರದೇಶದವರಿಗೆ ರೂ,2,00,000ಗಳ ಮಿತಿಯಲ್ಲಿರಬೇಕು. ಕನಿಷ್ಠ 21 ವರ್ಷಗಳಿಂದ ಗರಿಷ್ಠ 50 ವರ್ಷದೊಳಗಿರಬೇಕು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರು ಮತ್ತು ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು. ಉದ್ಯಮಶೀಲತಾ ಅಭಿವೃಧ್ಧಿ ಯೋಜನೆಯಡಿ ದ್ವಿ-ಚಕ್ರ, ತ್ರಿ ಚಕ್ರ ಸರಕು ಸಾಗಾಣಿಕೆ ವಾಹನ ಉದ್ದೇಶಗಳಿಗೆ ಘಟಕ ವೆಚ್ಚದಲ್ಲಿ ರೂ,50,000ಗಳ ಸಹಾಯಧನ ಹಾಗೂ ರೂ,20,000 ಸಾಲ ಮಂಜೂರು ಮಾಡಿ ಒಟ್ಟು ರೂ,70,000ಘಟಕ ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಘಟಕ ವೆಚ್ಚ ಮೀರಿದಲ್ಲಿ ಸದರಿ ವ್ಯತ್ಯಾಸದ ಮೊತ್ತವನ್ನು ಅರ್ಜಿದಾರರ ಸೇವಾ ವ್ಯಾಪ್ತಿಯ ಬ್ಯಾಂಕ್ಗಳಿಂದ ಮಂಜೂರಾತಿ ಪಡೆಯುವ ಷರತ್ತಿಗೆ ಒಳಪಟ್ಟು ಸಹಾಯಧನ ಮತ್ತು ಸಾಲ ಮಂಜೂರು ಮಾಡಲಾಗುತ್ತದೆ. ಅರ್ಜಿದಾರರು ಸಂಬಂಧಪಟ್ಟಂತೆ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಆಯಾ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.
 
                                             
                                             
                                             
                                             
                                             
                                             
                                             
                                             
                                            
 
                                     
                                     
                                     
                                    


 
                                     
                                     
                                    
+ There are no comments
Add yours