45 ವರ್ಷದ ಮಹಿಳೆ, 65 ವರ್ಷದ ಪುರುಷ ಸೇರಿ ತುಮಕೂರಿನಲ್ಲಿ ಮೂವರು ನಾಪತ್ತೆ

1 min read

 

45 ವರ್ಷದ ಮಹಿಳೆ, 65 ವರ್ಷದ ಪುರುಷ ಹಾಗೂ 80 ವರ್ಷದ ವೃದ್ಧೆ ನಾಪತ್ತೆ
Tumkurnews
ತುಮಕೂರು; ತಿಲಕ್‍ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 45 ವರ್ಷದ ಶಬನಾ, 80 ವರ್ಷದ ತೊಳಸಮ್ಮ ಹಾಗೂ 65 ವರ್ಷದ ರೆಹಮತ್ ಉಲ್ಲಾ ಎಂಬ ಮೂವರು ಕಾಣೆಯಾಗಿದ್ದು, ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿವೆ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಪ್ರಕರಣ -1: ಶಬನಾ ಎಂಬ 45 ವರ್ಷದ ಮಹಿಳೆಯು ಜೂನ್ 13ರಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಮನೆಯಿಂದ ಹೋದವಳು ಮರಳಿ ಬಂದಿರುವುದಿಲ್ಲ. ಈಕೆಯು 5 ಅಡಿ ಎತ್ತರವಿದ್ದು, ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ಬುರ್ಖಾ ಧರಿಸಿದ್ದಳು. ಈಕೆಯು ಕನ್ನಡ ಮತ್ತು ಉರ್ದು ಮಾತನಾಡುತ್ತಾಳೆ.
ಪ್ರಕರಣ -2: ತೊಳಸಮ್ಮ ಎಂಬು 80 ವರ್ಷದ ವೃದ್ಧೆಯು ಆಗಸ್ಟ್ 14ರಂದು ಸಂಜೆ 4.30ರ ಸಮಯದಲ್ಲಿ ವಾಕಿಂಗ್ ಹೋಗಿ ಬರುತ್ತೇನೆಂದು ಹೋದವಳು ಮರಳಿ ಬಂದಿರುವುದಿಲ್ಲ. ಈಕೆಯು 5 ಅಡಿ ಎತ್ತರವಿದ್ದು, ಕಾಣೆಯಾದ ಸಂದರ್ಭದಲ್ಲಿ ಕೆಂಪುಬಣ್ಣದ ಸ್ವೆಟರ್, ಕೇಸರಿ ಬಣ್ಣದ ಸೀರೆ ಧರಿಸಿದ್ದಳು. ಈಕೆಯು ಕನ್ನಡ ಮಾತನಾಡುತ್ತಾಳೆ.
ಪ್ರಕರಣ -3: ರೆಹಮತ್ ಉಲ್ಲಾ ಎಂಬ 65 ವರ್ಷದ ವ್ಯಕ್ತಿಯು ಜೂನ್ 9ರಂದು ಸಂಜೆ 4.30ರ ಸಮಯದಿಂದ ಕಾಣೆಯಾಗಿದ್ದಾನೆ. ಕಾಣೆಯಾದ ಸಂದರ್ಭದಲ್ಲಿ ಬಿಸ್ಕೆಟ್ ಬಣ್ಣದ ಚೆಕ್ಸ್ ಷರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದನು. ಈತನು ಕನ್ನಡ ಮತ್ತು ಉರ್ದು ಮಾತನಾಡುತ್ತಾನೆ.
ಈ ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕಲ್ಲಿ ದೂ.ವಾ.ಸಂ. 0816-2278202, 2278424, 2272340, 2278000 ಅಥವಾ ಮೊ.ಸಂ.9480802981/ 32/ 20ಯನ್ನು ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

About The Author

You May Also Like

More From Author

+ There are no comments

Add yours