ರಣಭೀಕರ ಮಳೆ; 24 ಗಂಟೆಯಲ್ಲಿ 22 ಮನೆಗಳು ಕುಸಿತ

1 min read

 

Tumkurnews
ತುಮಕೂರು; ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಗುಬ್ಬಿ ತಾಲ್ಲೂಕಿನಲ್ಲಿ ದಿನೇ ದಿನೆ ಮಳೆ ಅನಾಹುತಗಳು ಹೆಚ್ಚಾಗುತ್ತಿವೆ.
ಗುಬ್ಬಿ ತಾಲ್ಲೂಕೊಂದರಲ್ಲೇ ಈವರೆಗೂ ಸುಮಾರು 270ಕ್ಕೂ ಅಧಿನ ವಾಸದ ಮನೆಗಳು ಧರೆಗುರುಳಿವೆ! ಸೋಮವಾರ ಮುಂಜಾನೆವರೆಗೆ 24 ಗಂಟೆಗಳ ಅವಧಿಯಲ್ಲಿ ಸುರಿದ ಭಾರೀ ಮಳೆಗೆ ಸುಮಾರು 22 ಮನೆಗಳು ಕುಸಿದಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.

3 ದಿನ ಜಿಲ್ಲೆಯಾಧ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ; ಎಚ್ಚರ ವಹಿಸುವಂತೆ ಡಿಸಿ ಸೂಚನೆ
ಗುಬ್ಬಿ ತಾಲೂಕಿನ ಚೇಳೂರು ಭಾಗದಲ್ಲಿ 11, ಕಡಬ 7, ಹಾಗಲ ವಾಡಿ 1, ಸಿ.ಎಸ್ ಪುರದಲ್ಲಿ 2 ಮನೆಗಳು ಬಿದ್ದಿವೆ.
ಪರಿಹಾರ ವಿತರಣೆ; ಗುಬ್ಬಿ ತಾಲ್ಲೂಕಿನಲ್ಲಿ ಕುಸಿದು ಬಿದ್ದಿರುವ ಮನೆಗಳ ಪೈಕಿ 206 ಮನೆಗಳಿಗೆ ಎ.ಬಿ.ಸಿ ವರ್ಗಾವಣೆ ಮಾಡಿ ಪರಿಹಾರದ ಹಣವನ್ನು 55,100 ರೂ.ಗಳಿಂದ ಹಿಡಿದು 95,100 ರೂ.ಗಳ ವರೆಗೆ ವಿತರಣೆ ಮಾಡಲಾಗಿದೆ.
ಇದರ ಜೊತೆಗೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಹೊಸದಾಗಿ ಮನೆ ನಿರ್ಮಾಣ ಮಾಡಲು 5 ಲಕ್ಷ ರೂ., ಬಿದ್ದು ಹೋಗಿರುವ ಮನೆಗಳ ನವೀಕರಣಕ್ಕೆ ಬಿ ಕೆಟಗರಿಯಲ್ಲಿ 3 ಲಕ್ಷ ರೂ., ನೀಡುವ ಅವಕಾಶವಿದೆ.
ಜಲಬಂಧನ; ನಿಟ್ಟೂರು ಹೋಬಳಿಯ ಮೊದಲ ಘಟ್ಟ ಗ್ರಾಮದ ತೋಟದ ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಅಲ್ಲಿನ ‌ನಿವಾಸಿಗಳು ಜಲಬಂಧನಕ್ಕೆ ಒಳಗಾಗಿದ್ದಾರೆ, ಮನೆಯಿಂದ ಹೊರ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಮಳೆ ಹೆಚ್ಚಾದರೆ ಇನ್ನಷ್ಟು ಹಾನಿ ಸಂಭವಿಸುವ ಭೀತಿಯಲ್ಲಿ ಜನ ಬದುಕುವಂತಾಗಿದೆ.

ಜಿಲ್ಲೆಯ 1293 ಕೆರೆಗಳ ಸರ್ವೇಗೆ ಸೂಚನೆ; ಒತ್ತುವರಿ ತೆರವಿಗೆ ಅಲರ್ಟ್

About The Author

You May Also Like

More From Author

+ There are no comments

Add yours