ಪಲಾಯನ ಮಾಡುವುದಿಲ್ಲ, ಕಾನೂನಿನ ಮೇಲೆ ಗೌರವವಿದೆ; ಮುರುಘಾ ಶ್ರೀ

1 min read

 

Tumkurnews
ಚಿತ್ರದುರ್ಗ; ತಮ್ಮ ವಿರುದ್ಧದ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ) ಪ್ರಕರಣದಲ್ಲಿ ಯಾವುದೇ ಪಲಾಯನ ವಾದ ಮಾಡುವುದಿಲ್ಲ, ಧೈರ್ಯದಿಂದ ಎದುರಿಸುತ್ತೇವೆ ಎಂದು ಮುರುಘಾ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಶರಣರು ತಿಳಿಸಿದರು.
ಬಂಧನದ ವದಂತಿ ಬೆನ್ನಲ್ಲೇ ಮಠಕ್ಕೆ ಆಗಮಿಸಿದ ಶ್ರೀಗಳು, ಭಕ್ತರು ಹಾಗೂ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಕರಣದ ತನಿಖೆ ಕುರಿತು ಕಾನೂನಿನ ಮೇಲೆ ತಮಗೆ ಗೌರವವಿದೆ. ಇಷ್ಟು ದಿನ ಒಳಗಡೆ ಷಡ್ಯಂತ್ರ ನಡೆಯುತ್ತಿತ್ತು, ಇದೀಗ ಹೊರಗಡೆ ನಡೆಯುತ್ತಿದೆ‌. ಈ ಪ್ರಕರಣವನ್ನು ಧೈರ್ಯದಿಂದ ಎದುರಿಸುತ್ತೇವೆ ಎಂದರು.

You May Also Like

More From Author

+ There are no comments

Add yours