Tumkurnews
ತುಮಕೂರು; ರಣ ಮಳೆಗೆ ಜಿಲ್ಲೆಯಲ್ಲಿ ಮತ್ತೊಂದು ಬಲಿಯಾಗಿದೆ. ಕುಣಿಗಲ್ ತಾಲೂಕು ಹುತ್ರಿದುರ್ಗ ಬಳಿಯ ಶಿವಪುರ ಗ್ರಾಮದಲ್ಲಿ ನೀರಿನಲ್ಲಿ ಕೊಚ್ಚಿಹೋಗಿ
ನಾಗರಾಜು (28) ಎಂಬ ಯುವಕ ಸಾವನ್ನಪ್ಪಿದ್ದಾನೆ.
ಮಳೆಗೆ 4ನೇ ಬಲಿ; ಹಳ್ಳ ದಾಟುವಾಗ ಕೊಚ್ಚಿಹೋಗಿ ಶಿಕ್ಷಕ ಸಾವು
ಚಿಕ್ಕನಾಯಕನಹಳ್ಳಿ ತಾಲೂಕು ಮಾದಾಪುರ ತಾಂಡ್ಯ ಮೂಲದ ನಾಗರಾಜು, ಶಿವಪುರ ಗ್ರಾಮದ ಬಳಿ ಚೆಕ್ ಡ್ಯಾಮ್ ನಿರ್ಮಾಣಕ್ಕಾಗಿ ಕೂಲಿ ಕೆಲಸಕ್ಕೆಂದು ಬಂದಿದ್ದನು.
ಮಳೆ ಹೆಚ್ಚಾಗಿರುವುದರಿಂದ ಶಿವಪುರ, ದೀಪಾಂಬುದಿ ಕೆರೆ ಸಂಪರ್ಕಿಸುವ ನಾಲೆ ತುಂಬಿ ಹರಿಯುತ್ತಿತ್ತು. ಇದೇ ವೇಳೆ ಚೆಕ್ ಡ್ಯಾಮ್ ಬಳಿಯ ಶೆಡ್ ನಲ್ಲಿ ಮಲಗಿದ್ದ ನಾಗರಾಜು, ಮೂತ್ರ ವಿಸರ್ಜನೆಗೆಂದು ತೆರಳಿದ್ದಾನೆ. ಈ ಸಮಯದಲ್ಲಿ ಕತ್ತಲಲ್ಲಿ ಕಾಲು ಜಾರಿ ನಾಲೆಯೊಳಗೆ ಬಿದ್ದಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ.
ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours