Tumkur News
ತುಮಕೂರು: ಡಿ.ಎಸ್.ಎಸ್. ಮುಖಂಡ ಮೃತ ನರಸಿಂಹಮೂರ್ತಿ @ಕುರಿ ಮೂರ್ತಿಯ ಮರಣೋತ್ತರ ಪರೀಕ್ಷೆ ಮುಗಿಸಿದ ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದ್ದು, ಗುಬ್ಬಿ ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ವಾಗಿದೆ.
ಬುಧವಾರ ಡಿ.ಎಸ್.ಎಸ್. ಮುಖಂಡನ ಮೇಲೆ ನಡೆದ ಘಟನೆ ಸಂಬಂಧಿಸಿ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರಗ ಜ್ಞಾನೇಂದ್ರ ಕಾರಿಗೆ ಡಿ.ಎಸ್.ಎಸ್. ಕಾರ್ಯಕರ್ತರ ಮುತ್ತಿಗೆ!
ತಿಪಟೂರು ಬಳಿ ಆರೋಪಗಳನ್ನು ವಶಕ್ಕೆ ಪಡೆದಿದ್ದು, ಗುಬ್ಬಿ ಪೊಲೀಸರು ಕಿರಣ್, ಧೀರಜ್, ಬಸವರಾಜ್, ಫಯಾಜ್ ಸೇರಿ ಐವರನ್ನು ವಶಕ್ಕೆ ಪಡೆದು, ರಾತ್ರಿ ಇಡೀ ತೀವ್ರ ವಿಚಾರಣೆ ನಡೆಸುತ್ತಿದ್ದು, ವಿವಿಧ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ.
ಮಲ ಹೊರುವಂತಹ ಅನಿಷ್ಟ ಪದ್ಧತಿ ನಿರ್ನಾಮವಾಗಬೇಕು: ಎಂ.ಶಿವಣ್ಣ
ಇಂದು ಅಂತ್ಯಸ್ಕಾರ: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ, ಕುಟುಂಬಸ್ಥರಿಗೆ ನರಸಿಂಹಮೂರ್ತಿ ಮೃತದೇಹವನ್ನು ಹಸ್ತಾಂತರ ಮಾಡಿದರು. ಇಂದು ಬೆಳಗ್ಗೆ 10 ಗಂಟೆಗೆ ಅಂತ್ಯಸಂಸ್ಕಾರ ಮಾಡಲು ಮೃತ ನರಸಿಂಹಮೂರ್ತಿ ಕುಟುಂಬಸ್ಥರು ತಿರ್ಮಾನಿಸಿದ್ದಾರೆ.
+ There are no comments
Add yours