ಸಚಿವ ನಾಗೇಶ್ ಮನೆಗೆ ಬೆಂಕಿ ಪ್ರಕರಣ; ಬಿಜೆಪಿಯಿಂದ ಜಿಲ್ಲಾದ್ಯಂತ ಪ್ರತಿಭಟನೆ

1 min read

 

Tumkurnews
ತುಮಕೂರು; ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ತಿಪಟೂರಿನ ನಿವಾಸ ಮುಂದೆ ಎನ್.ಎಸ್.ಯು.ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬೆಂಕಿ ಹಚ್ಚುವ ಪ್ರಯತ್ನ ಮಾಡಿರುವುದನ್ನು ಖಂಡಿಸಿ ಬಿಜೆಪಿ ಗುರುವಾರ ಜಿಲ್ಲಾಧ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

ಶಿಕ್ಷಣ ಸಚಿವ ನಾಗೇಶ್ ಮನೆಗೆ ಬೆಂಕಿ ಹಚ್ಚುವ ಯತ್ನ; 15 ಮಂದಿ ಪೊಲೀಸ್ ವಶಕ್ಕೆ
ಘಟನೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್ ರವಿಶಂಕರ್, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ವಿವಿಧ ಅಯಾಮಗಳಿವೆ. ಆದರೆ ಕಾಂಗ್ರೆಸ್ ಪ್ರಾಯೋಜಿತ ಎನ್. ಎಸ್.ಯು.ಐ ಗೂಂಡಾ ಪಡೆಯು ಮನೆಗೆ ಬೆಂಕಿ ಹಚ್ಚುವ ಯತ್ನ ಮಾಡಿರುವುದು ಅಕ್ಷಮ್ಯ ಅಪರಾಧ. ಪೊಲೀಸ್ ಇಲಾಖೆ ಸಂಭವಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ತುಮಕೂರು ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ; ಇಂದೇ ಅರ್ಜಿ ಸಲ್ಲಿಸಿ
ಕೆಲವು ದಿನಗಳಿಂದ ರಾಜ್ಯದ ಎಲ್ಲೆಡೆ ಶಾಂತಿ ಕದಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದ್ದು, ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿಯ ಪ್ರಕರಣದಲ್ಲಿ ದಲಿತ ಶಾಸಕರಾದ ಅಖಂಡ ಶ್ರೀನಿವಾಸರವರ ಮನೆಗೆ ಕಾಂಗ್ರೆಸ್ ಗೂಂಡಾ ಪಡೆ ಬೆಂಕಿ ಹಚ್ಚಿದ ರೀತಿಯಲ್ಲೇ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರವರ ಮನೆಗೂ ನುಗ್ಗಿ, ಬೆಂಕಿ ಹಚ್ಚುವ ಪ್ರಯತ್ನಗಳನ್ನು ಮಾಡಿರುವುದು ಕಾಂಗ್ರೆಸ್ ನ ಹತಾಶತೆಯನ್ನು ತೋರಿಸುತ್ತದೆ ಎಂದು ಹೆಚ್.ಎಸ್.ರವಿಶಂಕರ್ ಕಿಡಿಕಾರಿದ್ದಾರೆ.

‘ಜನೌಷಧಿ’ ದುರ್ಬಲಗೊಳಿಸುವ ಯತ್ನ; ಸಂಸದರ ಎದುರೇ ಆರಗ ಜ್ಞಾನೇಂದ್ರ ಅಸಮಾಧಾನ
ಬಿಜೆಪಿ ಪ್ರತಿಭಟನೆ; ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಗೆ ನುಗ್ಗಿ, ಬೆಂಕಿ ಹಚ್ಚುವ ಕೃತ್ಯವನ್ನು ಖಂಡಿಸಿ, ಬಿಜೆಪಿ ಜಿಲ್ಲಾ ಘಟಕ ಹಾಗೂ ಮಂಡಲಗಳು ಜಿಲ್ಲಾದ್ಯಂತ ಇಂದು ಪ್ರತಿಭಟನೆ ನಡೆಸಲಿದೆ ಎಂದು ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ತಿಳಿಸಿದ್ದು, ತುಮಕೂರು ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಮಂಡಲಗಳು ತಮ್ಮ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಲಿದ್ದಾರೆಂದು ತಿಳಿಸಿದ್ದಾರೆ.

ಸಚಿವ ಬಿ.ಸಿ ನಾಗೇಶ್ ಮನೆ ಎದುರು ನಿಜಕ್ಕೂ ನಡೆದಿದ್ದೇನು?; ಇಲ್ಲಿದೆ ವಿಡಿಯೋ

About The Author

You May Also Like

More From Author

+ There are no comments

Add yours