ಜಿಲ್ಲೆಯಲ್ಲಿಂದು 27 ಪಾಸಿಟಿವ್, ತಿಪಟೂರು ಪೊಲೀಸ್ ಠಾಣೆ ಸೀಲ್ ಡೌನ್

1 min read

 

ತುಮಕೂರು(ಜು.8) tumkurnews.in

ಜಿಲ್ಲೆಯಲ್ಲಿ ಬುಧವಾರ 27 ಜನರಿಗೆ ಕೊರೊನಾ ಸೋಂಕು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 319 ತಲುಪಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕೊಂದರಲ್ಲೇ 16 ಜನರಲ್ಲಿ ಸೋಂಕು ಕಾಣಿಸಿದೆ. ಕೊರಟಗೆರೆ 1, ಮಧುಗಿರಿ 5, ತಿಪಟೂರು 3, ತುಮಕೂರಿನಲ್ಲಿ 2 ಪ್ರಕರಣ ಪತ್ತೆಯಾಗಿದೆ. ಇಬ್ಬರು ಗುಣಮುಖರಾಗಿದ್ದಾರೆ. ಉಳಿದಂತೆ 240 ಸಕ್ರೀಯ ಪ್ರಕರಣಗಳಿವೆ.

ತಿಪಟೂರು ಪೊಲೀಸ್ ಠಾಣೆಯಲ್ಲಿ ಓರ್ವ ಮುಖ್ಯಪೇದೆಗೆ ಕೊರೊನಾ ಸೋಂಕು ತಗುಲಿದ್ದು, ನಗರ ಪೊಲೀಸ್ ಠಾಣೆಯನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಲಾಗಿದೆ. ಪೊಲೀಸರು ಸೋಂಕಿಗೆ ಒಳಗಾಗುತ್ತಿರುವುದು ತೀವ್ರ ಆತಂಕಕ್ಕೀಡು ಮಾಡಿದೆ.

ಜಿಲ್ಲೆಯಲ್ಲಿ ಬುಧವಾರ ಒಂದು ಸಾವು ಕೂಡ ಸಂಭವಿಸಿದ್ದು, ಆ ವಿವರಗಳನ್ನು ಆರೋಗ್ಯ ಇಲಾಖೆ ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

You May Also Like

More From Author

+ There are no comments

Add yours