ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರಿಗೆ ಕೋವಿಡ್ ಕಂಟಕ

https://chat.whatsapp.com/Haj1IrKLgZpAIglCBfQbtB" alt="" width="397" height="133" />

ತುಮಕೂರು, ಜೂ.19
ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಮೂರು ತಾಲೂಕುಗಳಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಗುಬ್ಬಿ ತಾಲೂಕಿನ 55 ವರ್ಷ ವಯಸ್ಸಿನ ಪುರುಷ, ಚಿಕ್ಕನಾಯಕನಹಳ್ಳಿ ಪಟ್ಟಣ ನಿವಾಸಿ ಗಾರೆ ಕೆಲಸ ಮಾಡುವ 38 ವರ್ಷ ವಯಸ್ಸಿನ ಮಹಿಳೆ ಹಾಗೂ ತಿಪಟೂರು ನಗರ ನಿವಾಸಿ 42 ವರ್ಷದ ಪುರುಷ ಸೇರಿದಂತೆ ಮೂವರು ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ.
ಈ ಮೂರು ಜನರು ಜೂ.16 ರಂದು ಆಯಾ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಅನಾರೋಗ್ಯದ ನಿಮಿತ್ತ ತಪಾಸಣೆ ಮಾಡಿಸಿಕೊಂಡಿದ್ದರು. ಈ ವೇಳೆ ಅವರ ಗಂಟಲು ಸ್ರಾವವನ್ನು ತೆಗೆದು ಜಿಲ್ಲಾಸ್ಪತ್ರೆಯ ಕೋವಿಡ್ ತಪಾಸಣೆ ಲ್ಯಾಬ್ ಗೆ ಕಳಿಸಲಾಗಿತ್ತು. ಜೂ.18 ರ ಗುರುವಾರ ಈ ಮೂರು ಜನರ ಕೋವಿಡ್ 19 ತಪಾಸಣೆ ಪಾಸಿಟಿವ್ ಬಂದಿದೆ.
ಈ ಹಿನ್ನೆಲೆಯಲ್ಲಿ ಸೋಂಕಿತರು ವಾಸವಾಗಿದ್ದ ಗ್ರಾಮ ಹಾಗೂ ಬಡಾವಣೆಯನ್ನು ಕಂಟೋನ್ಮೆಂಟ್ ಜೋನ್ ಮಾಡಲಾಗಿದ್ದು, ಪ್ರಾಥಮಿಕ ಸಂಪರ್ಕವನ್ನು ಹೊಂದಿದ್ದವರನ್ನು ಐಸೋಲೇಶನ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
-tumkurnews.in

About The Author

You May Also Like

More From Author

+ There are no comments

Add yours