ಮಳೆ ಅಭಾವ; ನೀರು ಬಳಸದಂತೆ ರೈತರಿಗೆ ನೋಟೀಸ್!
Tumkurnews.in
ತುಮಕೂರು: ಮಳೆ ಅಭಾವದಿಂದ ಹೇಮಾವತಿ ಜಲಾಶಯಕ್ಕೆ ನೀರು ಒಳಹರಿವು ಕಡಿಮೆಯಾಗಿದ್ದು, ಪರಿಣಾಮವಾಗಿ ಕಾವೇರಿ ನೀರಾವರಿ ನಿಗಮವು ರೈತರಿಗೆ ನೀರನ್ನು ಬಳಸದಂತೆ ಎಚ್ಚರಿಕೆ ನೀಡಿದೆ.
ಹೆಣ್ಣಿನ ಧ್ವನಿ ಬಳಸಿ 41 ಲಕ್ಷ ಸುಲಿಗೆ! ತುಮಕೂರು ಮೂಲದ ಯುವಕ ಬಂಧನ
ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿ ಕೆ.ಎಸ್ ನಳಿನಿ ಅವರು ಆಗಸ್ಟ್ 8ರಂದು ಈ ಕುರಿತಾಗಿ ಪ್ರಕಟಣೆ ನೀಡಿದ್ದಾರೆ. ಅದರಂತೆ, ‘ಹೇಮಾವತಿ ಜಲಾಶಯಕ್ಕೆ ಪ್ರಸಕ್ತ ವರ್ಷ ನೀರಿನ ಒಳಹರಿವು ನಿರಾಶಾದಾಯಕವಾಗಿರುವುದರಿಂದ ನೀರಿನ ಅಭಾವ ನೀಗಿಸಿಕೊಳ್ಳಲು ಜಲಾಶಯದಲ್ಲಿರುವ ನೀರಿನ ಲಭ್ಯತೆಯನ್ನ ಅನುಸರಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಾಗೂ ಕೆರೆಗಳಿಗೆ ನೀರನ್ನು ತುಂಬಿಸುವ ಸಲುವಾಗಿ ಮಾತ್ರ ದಿನಾಂಕ: 09-08-2023 ರಿಂದ ದಿನಾಂಕ 12-09-2023 ರವರೆಗೆ (35 ದಿನಗಳವರೆಗೆ ಮಾತ್ರ): ಹೇಮಾವತಿ ಎಡದಂಡೆ ನಾಲೆ ಹಾಗೂ ಹೇಮಾವತಿ ಬಲದಂಡೆ ಮತ್ತು ಹೇಮಾವತಿ ಬಲಮೇಲ್ದಂಡೆ ನಾಲೆಗಳಲ್ಲಿ ನೀರನ್ನು ಹರಿಸಲಾಗುವುದು. ಆದ ಕಾರಣ ಅಚ್ಚುಕಟ್ಟಿನಲ್ಲಿ ಬರುವ ರೈತರು ನಾಲಾ ನೀರನ್ನು ಆಧರಿಸಿ ಕೃಷಿ ಚಟುವಟಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಮತ್ತು ರೈತರು ಇಚ್ಛಿಸಿದಲ್ಲಿ ಮಳೆಯ ಆಶ್ರಿತ ಬೆಳೆಗಳನ್ನು ಬೆಳೆಯಲು ಅಭ್ಯಂತರವಿರುವುದಿಲ್ಲ. ಈ ನಾಲೆಗಳ ನೀರನ್ನು ಕೃಷಿ ಚಟುವಟಕೆಗಳಿಗೆ ಉಪಯೋಗಿಸದಿರಲು ಕೋರಲಾಗಿದೆ. ರೈತರು ಅಚ್ಚುಕಟ್ಟಿನಲ್ಲಿ ನಾಲಾ ಆಶ್ರಿತ ನೀರಿನಿಂದ ಬೆಳೆಗಳನ್ನು ಬೆಳೆಯಲು ಪ್ರಯತ್ನಿಸಿದ್ದಲ್ಲಿ ಆಗಬಹುದಾದ ನಷ್ಟಕ್ಕೆ ಹೊಣೆ ಮತ್ತು ಜವಾಬ್ದಾರಿ ಇಲಾಖೆಯದಾಗಿರುವುದಿಲ್ಲ’ ಎಂದು ಪ್ರಕಟಣೆ ನೀಡಲಾಗಿದೆ.

ತುಮಕೂರು; ರಾಷ್ಟ್ರೀಯ ತೋಟಗಾರಿಕಾ ದಿನಾಚರಣೆ ಹಾಗೂ ತೋಟಗಾರಿಕಾ ಭೀಷ್ಮ ಡಾ.ಎಂ.ಹೆಚ್.ಮರಿಗೌಡ ಜನ್ಮಜಯಂತಿ
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours