ಸೇನೆ ಸೇರ ಬಯಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ; ಉಚಿತ ತರಬೇತಿಗೆ ಅರ್ಜಿ ಆಹ್ವಾನ

1 min read

 

Tumkurnews
ತುಮಕೂರು; ಭಾರತೀಯ ಸೇನೆ, ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ) 3(ಎ) ಹಾಗೂ 3(ಬಿ)ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಆಯ್ಕೆಯ ಪೂರ್ವಸಿದ್ಧತೆ ಬಗ್ಗೆ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತ ಊಟ ಮತ್ತು ವಸತಿಯೊಂದಿಗೆ ನೀಡುತ್ತಿದ್ದು, ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಸ್ವೀಕರಿಸುವ ದಿನಾಂಕವನ್ನು 2022ರ ಆಗಸ್ಟ್ 16ರವರೆಗೆ ವಿಸ್ತರಿಸಲಾಗಿದೆ (ಬಾಲಕರಿಗೆ ಮಾತ್ರ) ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಕ್ಕಲಿಗ ಅಭಿವೃದ್ಧಿ ನಿಗಮದಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿಗೊಳಿಸಿರುವ ಸಾಮಾನ್ಯ ಅರ್ಹತೆಗಳು; ಅಭ್ಯರ್ಥಿ ಮತ್ತು ಕುಟುಂಬದ ಆದಾಯ ಗರಿಷ್ಠ ವಾರ್ಷಿಕ ಆದಾಯ ಮಿತಿ – (ಪ್ರವರ್ಗ-1 ಕ್ಕೆ ರೂ. 2.50 ಲಕ್ಷಗಳು ಹಾಗೂ ಪ್ರವರ್ಗ-2 (ಎ), 3(ಎ) ಮತ್ತು 3(ಬಿ)ಗಳಿಗೆ ರೂ. 1 ಲಕ್ಷಗಳು), ಅಭ್ಯರ್ಥಿಯು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಂ ಇದ್ದಲ್ಲಿ ಮೇಲ್ಕಂಡಂತೆ ಸಮಾನವಾದ ಗ್ರೇಡ್ ಪಡೆದಿರಬೇಕು. ಅಕ್ಟೋಬರ್ 01, 2022ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯ ವಯಸ್ಸನ್ನು ಪರಿಗಣಿಸಲಾಗುವುದು. (ಅಭ್ಯರ್ಥಿಯು 01 ಅಕ್ಟೋಬರ್ 2000ದಿಂದ 01 ಏಪ್ರಿಲ್ 2005 (14ರ-22)ರ ದಿನಾಂಕಗಳ ನಡುವೆ ಜನಿಸಿರಬೇಕು) ತರಬೇತಿಯನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ನೀಡಲಾಗುವುದು. ಅಭ್ಯರ್ಥಿಗಳು ಸದರಿ ಮೂರು ಜಿಲ್ಲೆಗಳಲ್ಲಿ ತರಬೇತಿಗೆ ಆಯ್ಕೆ ಮಾಡಿಕೊಳ್ಳುವ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಅರ್ಜಿಯನ್ನು ಖುದ್ದಾಗಿ ಅಥವಾ ನೋಂಧಾಯಿತ ಅಂಚೆ ಮೂಲಕ ಸಲ್ಲಿಸಬಹುದಾಗಿದೆ.

ರೈಲ್ವೆ ಇಲಾಖೆಯಲ್ಲಿ ಉದ್ಯೋಗ; 1659 ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ನಮೂನೆ ಹಾಗೂ ಹೆಚಿನ ಮಾಹಿತಿಯನ್ನು ಇಲಾಖಾ ವೆಬ್‍ಸೈಟ್ https://bcwd.Karnataka.gov.in ನಿಂದ ಪಡೆಯಬಹುದಾಗಿದ್ದು, ಆಗಸ್ಟ್ 16, 2022ರಂದು ಅರ್ಜಿಸಲ್ಲಿಸಲು ಕಡೆಯದಿನವಾಗಿದೆ.
ಹೆಚ್ಚಿನ ಮಾಹಿತಿಗೆ ದಕ್ಷಿಣ ಕನ್ನಡ ಜಿಲ್ಲೆ ದೂ.ವಾ.ಸಂ. 0824-2225078, ಉಡುಪಿ : 0820-2574881, ಉತ್ತರ ಕನ್ನಡ : 08382-886589 ಅಥವಾ ಕೇಂದ್ರ ಕಚೇರಿ ದೂ.ವಾ.ಸಂ. 8050770004ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮಹಿಳಾ ಅಭಿವೃದ್ಧಿ ನಿಗಮದಿಂದ ಬಡ್ಡಿ ರಹಿತ ಸಾಲ; ಅರ್ಜಿ ಆಹ್ವಾನ

About The Author

You May Also Like

More From Author

+ There are no comments

Add yours