ವಿಕಲಚೇತನರಿಗೆ ಸರ್ಕಾರಿ ಸೌಲಭ್ಯ ತಲುಪಿಸಲು ಸಹಾಯವಾಣಿ ಆರಂಭ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

Tumkurnews
ತುಮಕೂರು; ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧೀನದಲ್ಲಿ ವಿಕಲ ಚೇತನರ ಸಹಾಯವಾಣಿ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯಲ್ಲಿರುವ ಸರ್ಕಾರದ ವಿವಿಧ ಯೋಜನೆಗಳ ಕುರಿತಂತೆ ವಿಕಲ ಚೇತನರು ಸಹಾಯವಾಣಿ ಮೂಲಕ ಮಾಹಿತಿ ಪಡೆಯ ಬಹುದಾಗಿದೆ.
ವಿಕಲ ಚೇತನರು ಇಲಾಖೆಯಲ್ಲಿರುವ ಸರ್ಕಾರದ ವಿವಿಧ ಕಾರ್ಯಕ್ರಮ, ಯೋಜನೆಗಳು ಹಾಗೂ ಸೇವಾ ಸೌಲಭ್ಯಗಳು ಮತ್ತು ಇನ್ನಿತರೆ ಪುನರ್ವಸತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ದೊರಕದೆ, ಸೌಲಭ್ಯಗಳಿಂದ ವಂಚಿತರಾಗದೆ ವಿಕಲಚೇತನರ ಸಹಾಯವಾಣಿ ಕೇಂದ್ರವನ್ನು ಬಳಕೆ ಮಾಡಿಕೊಂಡು, ಇಲಾಖಾ ಸೌಲಭ್ಯ, ಸಲಹೆಗಳ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾ ವಿಕಲ ಚೇತನರ ಸಹಾಯವಾಣಿ ಕೇಂದ್ರ, ಜಿಲ್ಲಾ ಬಾಲಭವನ ಆವರಣ, ಎಂ,ಜಿ ರಸ್ತೆಯಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಟ್ಟಡದ ಕೊಠಡಿ ಸಂಖ್ಯೆ-01ಕ್ಕೆ ವಿಕಲ ಚೇತನರ ವ್ಯಕ್ತಿಗಳು, ಪಾಲಕರು, ಪೋಷಕರು, ಸ್ವಯಂ ಸೇವಾ ಸಂಸ್ಥೆಗಳವರು ಖುದ್ದಾಗಿ ಮಾಹಿತಿ ಪಡೆಯಬಹುದು‌. ಮಾಹಿತಿಗೆ ದೂ.ವಾ.ಸಂ. 0816-2270029, 2005053ನ್ನು ಸಂಪರ್ಕಿಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours