ವಿದ್ಯಾರ್ಥಿ ಬಸ್ ಪಾಸ್ ಗೆ ಏನೇನು ದಾಖಲೆಗಳು ಬೇಕು?; ಇಲ್ಲಿದೆ ಮಾಹಿತಿ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ಬೆಂಗಳೂರು; ಕೆ.ಎಸ್.ಆರ್.ಟಿ.ಸಿಯಿಂದ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಬಸ್ ಪಾಸ್ ಸೌಲಭ್ಯ ನೀಡುತ್ತಿದ್ದು, ಪಾಸ್ ಪಡೆಯಲು‌ ಏನೇನು ದಾಖಲೆಗಳನ್ನು ಹೊಂದಿಸಬೇಕು ಎಂಬ ಮಾಹಿತಿ ‌ಇಲ್ಲಿದೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್!; ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
ಪಾಸ್ ಗೆ ಬೇಕಾದ ದಾಖಲೆಗಳು
1) ವಿದ್ಯಾ ಸಂಸ್ಥೆಯಿಂದ ಕೊಡಬೇಕಾದ ದೃಢೀಕರಣ ಪತ್ರ(ಸೈಬರ್ ಸೆಂಟರ್ ಗಳಲ್ಲಿ ದೊರೆಯುತ್ತದೆ, ಇದಕ್ಕೆ ಕಾಲೇಜು ಪ್ರಾಂಶುಪಾಲರ ಸಹಿ ಮತ್ತು ಸೀಲ್ ಮಾಡಿಸಿ ಕೊಡಬೇಕು)
2) ಆಧಾರ್ ಕಾರ್ಡ್ ಜೆರಾಕ್ಸ್
3) ಎರಡು ಸ್ಟಾಂಪ್ ಸೈಜಿನ ಫೋಟೋ
4) ಜಾತಿ ಪ್ರಮಾಣ ಪತ್ರ (ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ)
5) ಶುಲ್ಕ ರಶೀದಿ(ಖಾಸಗಿ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ)
ಗಮನಿಸಿ; ಬಸ್ ಪಾಸ್ ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು, ಮೊಬೈಲ್ ನಂಬರ್ ಲಿಂಕ್ ಆಗಿಲ್ಲದಿದ್ದರೆ ಕೂಡಲೇ ಸಮೀಪದ ಆಧಾರ್ ಸೇವಾಕೇಂದ್ರಕ್ಕೆ ತೆರಳಿ ಮೊಬೈಲ್ ನಂಬರ್ ಲಿಂಕ್ ಮಾಡಿಸುವುದು ಉತ್ತಮ. ಒಂದೇ ಮೊಬೈಲ್ ನಂಬರ್ ಮನೆಯ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ಆಧಾರ್ ಗೆ ಜೋಡಣೆಯಾಗಿದ್ದರೂ ಪಾಸ್ ಮಾಡಿಸುವಾಗ ಓಟಿಪಿ ಸಮಸ್ಯೆಯಾಗುತ್ತದೆ. ಹೀಗಾಗಿ ಪ್ರತಿ ವಿದ್ಯಾರ್ಥಿಯ ಆಧಾರ್ ಕಾರ್ಡ್ ನಲ್ಲಿ ಪ್ರತ್ಯೇಕ ‌ಮೊಬೈಲ್ ನಂಬರ್ ಇರುವಂತೆ ನೋಡಿಕೊಳ್ಳುವುದು ಉತ್ತಮ. ಬಸ್ ಪಾಸ್ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ವಿದ್ಯಾರ್ಥಿ ಬಸ್ ಪಾಸ್ ಗೆ ಏನು ಮಾಡುವುದು?; ಇಲ್ಲಿದೆ KSRTC ಮಾಹಿತಿ
(ವಿದ್ಯಾ ಸಂಸ್ಥೆಯಿಂದ ಕೊಡಬೇಕಾದ ದೃಢೀಕರಣ ಪತ್ರದ ಮಾದರಿ)

About The Author

You May Also Like

More From Author

+ There are no comments

Add yours