ಕೊರೋನಾ ಮಹಾ ಸ್ಪೋಟ, ತುಮಕೂರು, ಮಧುಗಿರಿ, ಶಿರಾ, ಪಾವಗಡ, ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ ಸೇರಿ 15 ಪಾಸಿಟಿವ್.

1 min read

 

ತುಮಕೂರು,(ಜೂ. 26) tumkurnews.in

ಜಿಲ್ಲೆಯಲ್ಲಿ ಕೊರೋನಾ ಮಹಾ ಸ್ಪೋಟ ಸಂಭವಿಸಿದೆ. ಶುಕ್ರವಾರ ಒಂದೇ ದಿನ 15 ಜನರಿಗೆ ಪಾಸಿಟಿವ್ ಬಂದಿದ್ದು, ಒಟ್ಟು ಸಕ್ರೀಯ ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ. ಅಲ್ಲದೇ ಅವರೆಗೆ 73 ಜನರಿಗೆ ಜಿಲ್ಲೆಯಲ್ಲಿ ಪಾಸಿಟಿವ್ ಬಂದಿದ್ದು, 39 ಜನ ಗುಣಮುಖವಾಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ.

ಮಧುಗಿರಿ 1, ತುಮಕೂರು 4, ಶಿರಾ 3, ಪಾವಗಡ 4, ತಿಪಟೂರು 1, ಗುಬ್ಬಿ 1, ಚಿಕ್ಕನಾಯಕನಹಳ್ಳಿ 1 ಪ್ರಕರಣ ಪತ್ತೆಯಾಗಿದೆ.

ವಿವರ:
ಮಧುಗಿರಿ ತಾಲೂಕಿನ ಭೋವಿ ಕಾಲನಿಯ 37 ವರ್ಷದ ಪುರುಷ.

ತುಮಕೂರು ತಾಲ್ಲೂಕಿನ 30 ವರ್ಷದ ಪುರುಷ, 58 ವರ್ಷದ ಪುರುಷ, 31 ವರ್ಷದ ಪುರುಷ, 11 ವರ್ಷದ ಬಾಲಕನಲ್ಲಿ ಪಾಸಿಟಿವ್ ಬಂದಿದೆ.

ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ 43 ವರ್ಷದ ಪುರುಷ(ಎಸ್.ಎಸ್.ಎಲ್.ಸಿ ಪಾಸಿಟಿವ್ ವಿದ್ಯಾರ್ಥಿ ತಂದೆ),
ಶಿರಾ ತಾಲ್ಲೂಕಿನ 36 ವರ್ಷದ ಹೆಣ್ಣು, 55 ವರ್ಷದ ಗಂಡು,

ಗುಬ್ಬಿ ತಾಲೂಕಿನ 48 ವರ್ಷದ ಪುರುಷ.

ಪಾವಗಡ ತಾಲೂಕಿನ 40 ವರ್ಷದ ಗಂಡು, 42 ವರ್ಷದ ಗಂಡು, ಪಾವಗಡದ 29 ವರ್ಷದ ಗಂಡು, 40 ವರ್ಷದ ಗಂಡು,

ತಿಪಟೂರು ತಾಲೂಕಿನ 40 ವರ್ಷದ ಗಂಡು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 22 ವರ್ಷದ ಗಂಡು ಸೋಂಕಿತರಾಗಿದ್ದಾರೆ.

About The Author

You May Also Like

More From Author

+ There are no comments

Add yours