ಟ್ರೇಡ್ ಲೈಸೆನ್ಸ್’ಗಾಗಿ ‘ವ್ಯಾಪಾರ’ ತಂತ್ರಾಂಶ ಬಳಕೆ

1 min read

 

ಟ್ರೇಡ್ ಲೈಸೆನ್ಸ್’ಗಾಗಿ ‘ವ್ಯಾಪಾರ’ ತಂತ್ರಾಂಶ ಬಳಕೆ

Tumkurnews
ತುಮಕೂರು: ಪಾಲಿಕೆಯ 35 ವಾರ್ಡುಗಳ ವ್ಯಾಪ್ತಿಯಲ್ಲಿರುವ ಉದ್ದಿಮೆದಾರರಿಗೆ ಟ್ರೇಡ್ ಲೈಸೆನ್ಸ್ ಹಾಗೂ ನವೀಕರಣಕ್ಕಾಗಿ ಏಪ್ರಿಲ್ 1 ರಿಂದ ಹೊಸದಾಗಿ ‘ವ್ಯಾಪಾರ’ ಎಂಬ ತಂತ್ರಾಂಶವನ್ನು ಬಳಕೆ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ತಿಳಿಸಿದ್ದಾರೆ.
ಈ ಹಿಂದೆ ಟ್ರೇಡ್ ಲೈಸೆನ್ಸ್ ನೀಡಲು ಹಾಗೂ ನವೀಕರಣ ಮಾಡಲು ಬಳಸಲಾಗುತ್ತಿದ್ದ ಹಳೆಯ ಓಯಸಿಸ್ ತಂತ್ರಾಂಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಈಗಾಗಲೇ ‘ವ್ಯಾಪಾರ’ ತಂತ್ರಾಂಶವನ್ನು ಬಳಕೆ ಮಾಡಲಾಗುತ್ತಿದೆ.
‘ಹೊಸ ಸಾಫ್ಟ್‍ವೇರ್ ಬಳಕೆ ಹೇಗೆ?: ಟ್ರೇಡ್ ಲೈಸೆನ್ಸ್ ಪಡೆಯಲು ಹಾಗೂ ನವೀಕರಣ ಮಾಡ ಬಯಸುವವರು http://www.mrc.gov.in ವೆಬ್ ಸೈಟ್‍ಗೆ ಭೇಟಿ ನೀಡಿ ‘ಸಿಟಿಜನ್ ಆನ್‍ಲೈನ್ ಸರ್ವೀಸ್’ ವಿಭಾಗವನ್ನು ಕ್ಲಿಕ್ ಮಾಡಿದರೆ ವಿವಿಧ ಸೇವೆಗಳು ತೆರೆದುಕೊಳ್ಳಲಿದೆ. ಅದರಲ್ಲಿ ‘ಅಪ್ಲೈ ಫಾರ್ ಟ್ರೇಡ್ ಲೈಸನ್ಸ್’ ವಿಭಾಗವನ್ನು ಕ್ಲಿಕ್ ಮಾಡಿ ಆನ್‍ಲೈನ್ ಮೂಲಕ ಅರ್ಜಿ ತುಂಬಿ ಟ್ರೇಡ್ ಲೈಸನ್ಸ್ ಪಡೆದುಕೊಳ್ಳಬಹುದು. ಈ ತಂತ್ರಾಂಶದ ಮೂಲಕವೇ ಟ್ರೇಡ್ ಲೈಸೆನ್ಸ್ ಶುಲ್ಕವನ್ನು ಸಹ ಪಾವತಿ ಮಾಡಬಹುದು. ವರ್ತಕರು ಸಲ್ಲಿಸಿದ ಅರ್ಜಿಯು ಪ್ರಸ್ತುತ ಯಾವ ಹಂತದಲ್ಲಿ ಇದೆ ಎಂಬುದನ್ನು ಆನ್‍ಲೈನ್‍ನಲ್ಲಿ ಪರಿಶೀಲಿಸಬಹುದು. ಪರವಾನಗಿಯನ್ನು ಆನ್‍ಲೈನ್‍ನಲ್ಲಿಯೇ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಹಿಂದೆ ಹಲವು ಹಂತದ ಪರಿಶೀಲನೆ ನಡೆಯುತಿತ್ತು. ಆದರೆ ಹೊಸ ತಂತ್ರಾಂಶದಲ್ಲಿ ಎರಡು ಹಂತದ ಪರಿಶೀಲನೆ ಮಾತ್ರ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಕ್ಯಾಲ್ಕುಲೇಟರ್’ನಂತೆ ನಿಮ್ಮ ಮಕ್ಕಳು ಗಣಿತದ ಲೆಕ್ಕಗಳನ್ನು ಬಿಡಿಸಲು ಕಲಿಯಬೇಕೆ? ಇಲ್ಲಿದೆ ಸುವರ್ಣಾವಕಾಶ!

About The Author

You May Also Like

More From Author

+ There are no comments

Add yours