ತುಮಕೂರು; ಲೋಕಾಯುಕ್ತ ದಾಳಿ; ಅಧಿಕಾರಿಗಳಿಗೆ ನಡುಕ
Tumkurnews
ತುಮಕೂರು; ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಮೇಲೆ ತುಮಕೂರಿನ ಆರ್.ಟಿ ನಗರದಲ್ಲಿರುವ ಕೆಐಎಡಿಬಿ ಅಧಿಕಾರಿ ಸಿ.ಎನ್ ಮೂರ್ತಿ ಅವರ ಮನೆ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆರ್.ಟಿ ನಗರದ ಶಂಕರಪುರಂನ ಡಿ ಬ್ಲಾಕ್ ನಲ್ಲಿರುವ ಸಿ.ಎನ್ ಮೂರ್ತಿ ಅವರ ಮನೆ ಮೇಲೆ ದಾಳಿ ನಡೆದಿದ್ದು, ಮೂರ್ತಿ ಮೈಸೂರಿನ ಕೆಐಎಡಿಬಿ ಕಚೇರಿಯಲ್ಲಿ ಕಾರ್ಯನಿರ್ವಾಹಕ ಇಂಜಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತುಮಕೂರಿನಲ್ಲಿ ವಾಸವಾಗಿದ್ದಾರೆ.
ಬುಧವಾರ(ಇಂದು) ಬೆಳಗ್ಗೆ ಲೋಕಾಯುಕ್ತ ಎಸ್.ಪಿ ವಲಿಬಾಷಾ ನೇತೃತ್ವದಲ್ಲಿ ಡಿವೈಎಸ್ಪಿಗಳಾದ ಮಂಜುನಾಥ್ ಮತ್ತು ಹರೀಶ್ ತಂಡ ದಾಳಿ ನಡೆಸಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ಸಮಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಿ.ಎನ್.ಮೂರ್ತಿ ವಾಸವಿರುವ ಮನೆ ಹಾಗೂ ಸಮೀಪದಲ್ಲಿರುವ ಅವರ ಮಾವ ಮತ್ತು ನಾದಿನಿ ನಿವಾಸದ ಮೇಲೆಯೂ ದಾಳಿ ನಡೆಸಿ ತಪಾಸಣೆ ಮಾಡಿದ್ದಾರೆ.
ಅಧಿಕಾರಿಗಳಿಗೆ ಸಿಕ್ಕಿದ್ದೇನು?; ದಾಳಿಯಲ್ಲಿ ಹಲವು
ಕಾಗದ ಪತ್ರಗಳು, 8 ಲಕ್ಷ ನಗದು, 1 ಕಿಲೋಗೂ ಅಧಿಕ ಚಿನ್ನಾಭರಣಗಳು ಲಭ್ಯವಾಗಿವೆ ಎಂದು ಲೋಕಾಯುಕ್ತ ಎಸ್ಪಿ ವಲಿಬಾಷಾ ತಿಳಿಸಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಚುರುಕಾಗಿರುವುದು ಅಧಿಕಾರಿಗಳಿಗೆ ನಡುಕ ಹುಟ್ಟಿಸಿದೆ.




+ There are no comments
Add yours