ಸಾವರ್ಕರ್ ಫ್ಲೆಕ್ಸ್ ಹಾನಿ ಪ್ರಕರಣ; ಪೊಲೀಸ್ ಠಾಣೆ ಮೆಟ್ಟಿಲೇರಿದ ಶಾಸಕ ಜ್ಯೋತಿಗಣೇಶ್
Tumkurnews
ತುಮಕೂರು; ಸ್ವಾತಂತ್ರದ ಅಮೃತ ಮಹೋತ್ಸವ ಕಾರ್ಯಕ್ರಮದ ನಿಮಿತ್ತ ಹಾಕಿದ್ದ ವೀರ ಸಾರ್ವಕರ್ ಫ್ಲೆಕ್ ಹರಿದು ಹಾಕಿರುವ ದುಷ್ಕರ್ಮಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಾಸಕ ಜಿ.ಬಿ ಜ್ಯೋತಿಗಣೇಶ್ ಪೊಲೀಸರಿಗೆ ಸಲ್ಲಿಸಿದ್ದಾರೆ.
ನಗರದ ಎಸ್.ಪಿ ಕಚೇರಿಗೆ ತೆರಳಿ ಎಸ್.ಪಿ ರಾಹುಲ್ ಕುಮಾರ್ ಶಹಪುರವಾಡ್ ಅವರಿಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಬಿ ಜೋತಿಗಣೇಶ್ ದೂರು ಸಲ್ಲಿಸಿದ್ದಾರೆ.
ಸಾವರ್ಕರ್ ಫ್ಲೆಕ್ಸ್’ಗೆ ಹಾನಿ ಪ್ರಕರಣ; ಎಸ್.ಪಿ ಹೇಳಿದ್ದೇನು? ವಿಡಿಯೋ
ಭಾರತದ 75ನೇ ಸ್ವಾತಂತ್ರ ದಿನ ಅಮೃತಮಹೋತ್ಸವದ ಅಂಗವಾಗಿ ನಗರದಾದ್ಯಂತ 85 ಜನ ಸ್ವಾತಂತ್ರ ಹೋರಾಟಗಾರರ ಸಣ್ಣ ಮಾಹಿತಿಯನ್ನು ಒಳಗೊಂಡ ಭಾವಚಿತ್ರದ ಫ್ಲೆಕ್ ಹಾಕಲಾಗಿತ್ತು. ಅಪ್ರತಿಮ ಹೋರಾಟಗಾರರಾದ ವೀರ ಸಾರ್ವಕರ್ ಅವರ ಫೋಟೋವನ್ನು ಕಿತ್ತು ಹಾಕುವ ಮೂಲಕ ಅವಮಾನಿಸಲಾಗಿದೆ. ಇದು ರಾಷ್ಟ್ರವಿರೋಧಿ ಕೃತ್ಯ, ನಾಡಿನ ಜನರಿಗೆ ಅಪಮಾನ ಮಾಡಿದಂತಾಗಿದ್ದು, ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಆದ್ದರಿಂದ ಈ ಕೃತ್ಯವೆಸಗಿದ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಬೇಕು ಎಂದು ದೂರು ಸಲ್ಲಿಸಿದರು.
ತುಮಕೂರು; ಸಾವರ್ಕರ್ ಭಾವಚಿತ್ರದ ಫ್ಲೆಕ್ಸ್ ಹರಿದ ಕಿಡಿಗೇಡಿಗಳು
ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಹೆಬ್ಬಾಕ, ನಗರಾಧ್ಯಕ್ಷ ಹನುಮಂತರಾಜು, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್, ಮಂಜುನಾಥ್, ಮುಖಂಡರಾದ ಇಂದ್ರಕುಮಾರ್, ಮಹೇಶಬಾಬು, ಯುವಮೋರ್ಚಾ ಅಧ್ಯಕ್ಷ ಯಶಸ್, ವಿನಯ್, ರುದ್ರೇಶ್ ಮತ್ತಿತರರಿದ್ದರು.
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours