Tumkurnews
ತುಮಕೂರು; ಕಳೆದೊಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ತುಮಕೂರು ನಗರ ವ್ಯಾಪ್ತಿಯಲ್ಲಿನ ಹಲವು ಕೆರೆಗಳು ಭರ್ತಿಯಾಗಿ ಕೋಡಿ ಹರಿದ ಕಾರಣ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿರುವ ಪ್ರಕರಣಗಳು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ದಿನದ 24 ಗಂಟೆಯೂ ಕೆಲಸನಿರ್ವಹಿಸುವ ಸಹಾಯವಾಣಿ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.
ವ್ಯಾಪಕ ಮಳೆ; ಶಾಲೆಗಳಿಗೆ ರಜೆ ಘೋಷಿಸಲು ಡಿಸಿ ಸೂಚನೆ
ತುಮಕೂರು ಮಹಾನಗರ ಪಾಲಿಕೆ ರ್ಯಾಪಿಡ್ ರೆಸ್ಪಾನ್ಸ್
155304
0816-2213400/ 401/ 402/ 403.
ಅಗ್ನಿಶಾಮಕ ಠಾಣೆ ನಿಯಂತ್ರಣ ಕೊಠಡಿ; 0816-2283101
ಆಂಬುಲೆನ್ಸ್; 108
ಮಳೆ ಹೆಚ್ಚಾಗಲಿದೆ; ಜಿಲ್ಲೆಯ ಬಹುತೇಕ ಕೆರೆಗಳು ತುಂಬಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಂಭವವಿರುವುದರಿಂದ, ಜಿಲ್ಲೆಯ ಸಾರ್ವಜನಿಕರು ಮಳೆಯಿಂದ ಉಂಟಾಗುವ ಯಾವುದೇ ತುರ್ತು ಪರಿಸ್ಥಿತಿಯ ಕುರಿತು ಈ ಮೇಲ್ಕಂಡ ದೂರವಾಣಿಗಳಿಗೆ ದಿನದ 24 ಗಂಟೆಯೂ ಸಹ ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವ್ಯಾಪಕ ಮಳೆ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಜಗಮಂಗಲಿ ನದಿ
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours