ರಸ್ತೆ ಕಾಮಗಾರಿ ವೇಳೆ ಅವಘಡ; ಡಾಂಬರು ಸಿಡಿದು ಯುವತಿ ಕಣ್ಣಿಗೆ ಹಾನಿ

1 min read

 

Tumkurnews

ಕೊರಟಗೆರೆ; ಟಾರ್ ಡ್ರಮ್ ಸಿಡಿದು ಐವರಿಗೆ ಮೈ ತುಂಬಾ ಟಾರು ಅಂಟಿಕೊಂಡ ಘಟನೆ ನಡೆದಿದೆ. ಪಟ್ಟಣದ ಕರ್ನಾಟಕ ಬ್ಯಾಂಕ್ ಮುಂಭಾಗ ಘಟನೆ ಸಂಭವಿಸಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಟ್ರಾಕ್ಟರ್ ನಲ್ಲಿದ್ದ ಡ್ರಮ್ ನಿಂದ ಡಂಪ್ ಮಾಡಿಕೊಳ್ಳುವ ವೇಳೆ ಡಾಂಬರು ಸಿಡಿದಿದೆ. ಟಾರು ಸುಡುವ ವಾಹನಕ್ಕೆ ಡಂಪ್ ಮಾಡಿಕೊಳ್ತಿದ್ದ ವೇಳೆ ಅವಘಡವಾವಿದೆ. ಏಕಾಏಕಿ ಡ್ರಮ್ ನ ಮುಚ್ಚಳ ತೆರೆದುಕೊಂಡು ಆಟೊದಲ್ಲಿ ಬರುತ್ತಿದ್ದ ಐವರಿಗೆ ಟಾರು ಸಿಡಿದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮ್ಯಾನೇಜರ್, ಸೂಪರ್ ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಟೊದಲ್ಲಿದ್ದ ಐವರ ದೇಹಕ್ಕೆ ಡಾಂಬರು ಅಂಟಿಕೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಿಲ್ಲ. ಆದರೆ ಯುವತಿಯೋರ್ವಳ ಕಣ್ಣುಗಳಿಗೆ ಟಾರು ಅಂಟಿಕೊಂಡಿದ್ದು, ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಆಟೋದಲ್ಲಿದ್ದವರು ಗೊರವನಹಳ್ಳಿ ಮೂಲದ ಪ್ರಯಾಣಿಕರಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ನಹೀದಾ ಜಂಜಂ ಭೇಟಿ ನೀಡಿದ್ದಾರೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತುಮಕೂರು ಜೈಲಿಗೆ ಡಿ.ಕೆ ಶಿವಕುಮಾರ್ ಭೇಟಿ; ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

About The Author

You May Also Like

More From Author

+ There are no comments

Add yours