ಕುರುಬರ ಜಾಗೃತಿ ಸಮಾವೇಶಕ್ಕೆ ವ್ಯಾಪಕ ವಿರೋಧ!; ಕಾಂಗ್ರೆಸ್ ನಡೆಗೆ ಬಿಜೆಪಿ ಕಿಡಿ

1 min read

 

Tumkurnews
ತುಮಕೂರು; ನಗರದಲ್ಲಿ ಶನಿವಾರ ಹಮ್ಮಿಕೊಂಡಿರುವ ಜಿಲ್ಲಾ ಕುರುಬರ ಜಾಗೃತಿ ಸಮಾವೇಶಕ್ಕೆ ಕುರುಬ ಸಮುದಾಯದಲ್ಲೇ ವಿರೋಧ ವ್ಯಕ್ತವಾಗಿದ್ದು, ಅನೇಕ ಮುಖಂಡರು ಸಮಾವೇಶದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಇದೇ ಮೇ 28ರ ಶನಿವಾರ ತುಮಕೂರು ನಗರದ ಶಿರಾಗೇಟ್ ಕಾಳಿದಾಸ ಪ್ರೌಢಶಾಲೆಯಲ್ಲಿ ಜಿಲ್ಲಾ ಕುರುಬರ ಜಾಗೃತಿ ಸಮಾವೇಶವನ್ನು ಸಮುದಾಯದ ಕೆಲವು ಮುಖಂಡರು ಆಯೋಜಿಸಿದ್ದಾರೆ. ಈ ಸಮಾವೇಶ ಇದೀಗ ಕುರುಬರಲ್ಲಿ ಒಗ್ಗಟ್ಟು ಮೂಡಿಸುವ ಬದಲಾಗಿ ಒಡಕು ಮೂಡಿಸಲು ಕಾರಣವಾಗುತ್ತಿದೆ. ಸಮುದಾಯದ ಸಂಘಟನೆ ಹೆಸರಿನಲ್ಲಿ ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಅನೇಕರು ಸಮಾವೇಶದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ತುಮಕೂರಿನ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕಾಂಗ್ರೆಸ್ ನೇತೃತ್ವ; ಹೆಸರಿಗೆ ಕುರುಬರ ಜಾಗೃತಿ ಸಮಾವೇಶ ಆದರೂ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವುದು ಸಮುದಾಯದ ಅನೇಕರ ವಿರೋಧಕ್ಕೆ ಕಾರಣವಾಗಿದೆ. ಇತ್ತೀಚಿಗೆ ನಡೆದ ಮಡಿವಾಳರ ಸಮಾವೇಶ ಕೂಡ ಕಾಂಗ್ರೆಸ್ ನೇತೃತ್ವದಲ್ಲಿ ನಡೆದಿದ್ದು, ಕಾಂಗ್ರೆಸ್ ನಾಯಕರು ಹಿಂದುಳಿದ ಸಮುದಾಯಗಳ ಒಗ್ಗಟ್ಟು ಮುರಿಯುತ್ತಿದ್ದಾರೆ ಎಂದು ಇತರೆ ರಾಜಕೀಯ ಪಕ್ಷಗಳಲ್ಲಿನ ಈ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶನಿವಾರ ನಡೆಯಲಿರುವ ಕುರುಬರ ಸಮಾವೇಶ ಕೂಡ ಕಾಂಗ್ರೆಸ್ ಮುಖಂಡರು ಮುಂದಾಳತ್ವದಲ್ಲಿ ನಡೆಯುತ್ತಿರುವುದು ಅನೇಕ ಚರ್ಚೆಗಳಿಗೆ ಕಾರಣವಾಗಿದೆ.

ವಿದ್ಯಾರ್ಥಿ ಬಸ್ ಪಾಸ್ ಗೆ ಏನೇನು ದಾಖಲೆಗಳು ಬೇಕು?; ಇಲ್ಲಿದೆ ಮಾಹಿತಿ
ಬಿಜೆಪಿ ವಿರೋಧ; ಮೇ 28ರ ಕುರುಬರ ಸಮಾವೇಶದಲ್ಲಿ ಭಾಗವಹಿಸದಿರಲು ಕುರುಬ ಸಮಾಜದ ಬಿಜೆಪಿ ಮುಖಂಡರು‌ ನಿರ್ಧರಿಸಿದ್ದಾರೆ. ಈ ಕುರಿತು ಬಿಜೆಪಿ ತುಮಕೂರು ನಗರಾಧ್ಯಕ್ಷ ಹನುಮಂತರಾಜು ಟಿ.ಎಚ್ ಹೇಳಿಕೆ ನೀಡಿದ್ದು, ‘ಕುರುಬ ಸಮಾಜವನ್ನು ದಾರಿ ತಪ್ಪಿಸಿ, ಸಮಾಜದ ಹೆಸರಿನಲ್ಲಿ ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್ ಏಜೆಂಟರುಗಳು ಮಾಡುತ್ತಿರುವ ಕಾಂಗ್ರೆಸ್ ಜಾಗೃತಿ ಸಮಾವೇಶವೇ ಹೊರತು ಕುರುಬರ ಸಮಾವೇಶವಲ್ಲ’ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಹಾಗೂ ಜಿಲ್ಲೆಯ ಬೇರೆ ಬೇರೆ ಪಕ್ಷದಲ್ಲಿರುವ ನಾಯಕರನ್ನು ದೂರವಿಟ್ಟು, ಕುರುಬ ಸಮಾಜದ ಮಹಾಸ್ವಾಮೀಜಿಗಳನ್ನು ಸಹ ದೂರವಿಟ್ಟು
ಜಿಲ್ಲೆಯ ಕಾಂಗ್ರೆಸ್ ನಾಯಕರುಗಳು ಕುರುಬ ಸಮಾಜದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಾಡುತ್ತಿರುವ ಸಮಾವೇಶ ಇದಾಗಿದೆ. ಈ ಸಮಾವೇಶದ ಬಗ್ಗೆ ಜಿಲ್ಲೆಯ ಕುರಬರು ಜಾಗೃತರಾಗಿದ್ದಾರೆ. ಜಿಲ್ಲೆಯ ಕುರಬ ಸಮಾಜದ ಅತ್ಯಂತ ಹಿರಿಯ ನಾಯಕರೂ, ಮಾಜಿ ಶಾಸಕರಾದ ಡಾ.ಹುಲಿನಾಯ್ಕರ್ ಅವರು ಹಾಗೂ ಬಿ.ಕೆ ಮಂಜುನಾಥ್ ಅವರು ಹಾಗೂ ಇನ್ನೂ ಅನೇಕ ಮುಖಂಡರು ಈ ಸಮಾವೇಶದಿಂದ ದೂರ ಉಳಿದಿದ್ದಾರೆ ಎಂದು ಹನುಮಂತ ರಾಜು ತಿಳಿಸಿದ್ದಾರೆ.

ಮಡಿವಾಳ ಸಮಾಜಕ್ಕೆ MLC ಸ್ಥಾನ, MLA ಟಿಕೆಟ್; ಸಿದ್ದರಾಮಯ್ಯ ಭರವಸೆ

About The Author

You May Also Like

More From Author

+ There are no comments

Add yours