ತುಮಕೂರು(ಜು.4) tumkurnews.in
ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ.
ತುಮಕೂರು ನಗರದ ಮರಳೂರುದಿಣ್ಣೆ ನಿವಾಸಿ 50 ವರ್ಷದ ಮಹಿಳೆ ಜು.3 ರ ಶುಕ್ರವಾರ ಮೃತ ಪಟ್ಟಿದ್ದಾರೆ.
ಮೃತ ಮಹಿಳೆಯು(ಟಿಎಂಕೆ 213) ಜೂ.26 ರಿಂದ 28ರ ವರೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಇವರ ಗಂಟಲುದ್ರವ ಮಾದರಿಯನ್ನು ತಪಾಸಣೆಗೆ ಒಳಪಡಿಸಿದಾಗ ಕೊರೋನಾ ಸೋಂಕು ದೃಢಪಟ್ಟಿತ್ತು.
ಮೃತರ ಟ್ರಾವೆಲ್ ಹಿಸ್ಟರಿ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಕೊರೋನಾಗೆ ಕುಣಿಗಲ್ 1, ಶಿರಾ 1, ತುಮಕೂರು 6 ಸೇರಿ ಒಟ್ಟು 8 ಬಲಿಯಾಗಿದೆ.
+ There are no comments
Add yours