ತುಮಕೂರು: ಆಸ್ತಿ ಮಾಲೀಕರಿಗೆ ‘ಶುಭ’ ಸುದ್ದಿ
Tumkur News
ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರು ಪ್ರಸಕ್ತ 2026-27ನೇ ಸಾಲಿನ ಆಸ್ತಿ ತೆರಿಗೆಯನ್ನು 2026ರ ಏಪ್ರಿಲ್ ತಿಂಗಳ ಅಂತ್ಯದೊಳಗೆ ಪಾವತಿಸಿದಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ.5ರಷ್ಟು ರಿಯಾಯತಿ ನೀಡಲಾಗುವುದು ಎಂದು ಪಾಲಿಕೆ ಆಯುಕ್ತೆ ಶುಭ ಬಿ. ತಿಳಿಸಿದ್ದಾರೆ.
ಆಸ್ತಿ ಮಾಲೀಕರು ಆಸ್ತಿ ತೆರಿಗೆ, ನೀರಿನ ಶುಲ್ಕ ಮತ್ತು ಯು.ಜಿ.ಡಿ. ಶುಲ್ಕವನ್ನು ಏಪ್ರಿಲ್ 30ರೊಳಗಾಗಿ ನಗದು ಪಾವತಿ ಕೌಂಟರ್’ಗಳ ಮೂಲಕ, ಕರ್ನಾಟಕ ಒನ್ ಕೇಂದ್ರ, ಆನ್ಲೈನ್ www.tumakurucity.mrc.gov.in ಮೂಲಕ ಹಾಗೂ ವಾರ್ಡ್ ಬಿಲ್ ಕಲೆಕ್ಟರ್’ಗಳಲ್ಲಿ ನೇರವಾಗಿ ಪಾವತಿಸಿ ರಸೀದಿ ಪಡೆಯಬಹುದು.
ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.