ಕೆ.ಎನ್ ರಾಜಣ್ಣ ರಾಜೀನಾಮೆಗೆ ಅದೊಂದೇ ಕಾರಣ! ಏನದು? ಇಲ್ಲಿದೆ ಮಾಹಿತಿ

1 min read

 

ಕೆ.ಎನ್ ರಾಜಣ್ಣ ರಾಜೀನಾಮೆಗೆ ಅದೊಂದೇ ಕಾರಣ! ಏನದು? ಇಲ್ಲಿದೆ ಮಾಹಿತಿ

Tumkurnews
ಬೆಂಗಳೂರು: ಅಚ್ಚರಿಯ ಬೆಳವಣಿಗೆಯಲ್ಲಿ ರಾಜ್ಯದ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ತಮ್ಮ ‌ಸಚಿವ ಸ್ಥಾನಕ್ಕೆ ಸೋಮವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ‌ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎನ್ ರಾಜಣ್ಣ ರಾಜೀನಾಮೆಗೆ ಅವರು ಪಕ್ಷದ ವಿರುದ್ಧ ಆಡಿದ ಮಾತುಗಳು ಕಾರಣ ಎನ್ನಲಾಗಿದ್ದು, ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಮುಖಂಡರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ತಲೆದಂಡಕ್ಕೆ ಕಾರಣ ಏನು?: ರಾಜ್ಯದಲ್ಲಿ ಬಿಜೆಪಿಯಿಂದ ಮತಗಳ್ಳತನ ಆರೋಪ ಮಾಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಕೆ.ಎನ್ ರಾಜಣ್ಣ ಆಡಿದ ಮಾತುಗಳೇ ಅವರ ತಲೆದಂಡಕ್ಕೆ ಕಾರಣವಾಯಿತು ಎನ್ನಲಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆಯೇ ಎಂಬ ವಿಚಾರದ ಬಗ್ಗೆ ಇತ್ತೀಚೆಗೆ ಮಾಧ್ಯಮಗಳು ರಾಜಣ್ಣ ಅವರನ್ನು ಪ್ರಶ್ನೆ ಮಾಡಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಜಣ್ಣ, ‘ನೋಡಿ ಸುಮ್ನೆ ಇದನ್ನೆಲ್ಲಾ ಮಾತನಾಡೋಕೆ ಹೋದ್ರೆ ಬೇರೆ ಬೇರೆ ಆಗುತ್ತೆ.
ವೋಟರ್ ಲಿಸ್ಟ್ ಎಲ್ಲಾ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು.
ಅವಾಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ ಎಲ್ಲರು? ಸುಮ್ನೆ ಮಾತನಾಡೋಕೆ ಹೋದ್ರೆ ಮಾತನಾಡಬೇಕಾಗುತ್ತೆ.
ಈ ಅಕ್ರಮಗಳು ನಡೆದಿರೋದು ಸತ್ಯ.
ಇದರಲ್ಲಿ ಯಾವುದೇ ಸುಳ್ಳು ಏನಿಲ್ಲ. ಅಕ್ರಮಗಳು ನಮ್ಮ ಕಣ್ಮುಂದೇನೆ ನಡೆದಿದ್ದವಲ್ಲಾ ನಮಗೆ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಅಂತ. ಅದ್ದರಿಂದ ನಾವು ಮುಂದೆ ಎಚ್ಚರಿಕೆಯಿಂದ ಇರಬೇಕು. ಮೊದಲೆಲ್ಲಾ ಡ್ರಾಪ್ ಎಲೆಕ್ಷನ್ ಕಮಿಷನ್ ಕರೆದು ರೊಲ್ ಮಾಡ್ತಿದ್ರು. ಅವರು ಮಾಡಬಾರದ್ದನ್ನ ಮಾಡಿ ವೋಟರ್ ಲಿಸ್ಟ್ ಬದಲಾವಣೆ ಮಾಡಿ ಪ್ರಧಾನ ಮಂತ್ರಿ ಆಗಿದ್ದಾರೆ. ಅದು ನೂರಕ್ಕೆ ನೂರು ಸತ್ಯ. ಅದರಲ್ಲಿ ಎರಡನೇ ಮಾತಿಲ್ಲ. ಅದರೆ ನಮಗೆ ಡ್ರಾಪ್ ಎಲೆಕ್ಷನ್ ಕಮಿಷನ್ ನಿಂದ ರೋಲ್ ಮಾಡುವಾಗ ನೋಡಿಕೊಳ್ಳಬೇಕಿತ್ತು. ಮಹದೇವಪುರದಲ್ಲಂತೂ ಮೋಸ ಮಾಡಿರೋ ನಿಜ. ಒಬ್ಬನೆ ಮೂರು ಮೂರು ಕಡೆಗಳಲ್ಲಿ ವೋಟರ್ ಲಿಸ್ಟ್ ಸೇರಿಕೊಂಡು ವೋಟ್ ಹಾಕಿದ್ರೆ.
10,15 ಜನ ಇರೋ ಕಡೆಗಳಲ್ಲಿ 60 ಜನ ವೋಟರ್ ಲಿಸ್ಟ್ ಗೆ ಸೇರಿಸ್ತಾರೆ. ಅಡ್ರೆಸ್ ಗಳಿಲ್ಲ, ತಂದೆ ಹೆಸರಿಲ್ಲ.
ಈತರದ್ದನ್ನೆಲ್ಲಾ ಅಕ್ರಮವಾಗಿ ಮಾಡಿದ್ದಾರೆ. ಆದರೆ ನಾವು ಡ್ರಾಪ್ಟ್ ಎಲೆಕ್ಟ್ರಾನೊ ರೋಲ್ ಮಾಡಿದಾಗ ನಾವು ಅಬ್ಜಕ್ಷನ್ ಹಾಕಬೇಕು. ಅವಗೊಂದು ಜವಾಬ್ದಾರಿ ಇರುತ್ತದೆ. ಅವಾಗ ನಾವು ಸುಮ್ನೆ ಇದ್ದು ಇವಾಗ ಹೇಳ್ತಿದ್ದೆವೆ. ಚುನಾವಣೆಗಳಲ್ಲಿ ಪ್ರಚಾರ ಎಲ್ಲಾ ಮಾಡಿದ್ದೇವೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದೆ ನಾವು ಎಚ್ಚರಿಕೆಯಿಂದ ಇರೋಕೆ ಮಾರ್ಗಸೂಚಿ’ ಎಂದು ಹೇಳಿಕೆ ನೀಡಿದ್ದರು.
ರಾಹುಲ್ ಗಾಂಧಿ ಪ್ರತಿಭಟನೆಗೆ ತದ್ವಿರುದ್ಧವಾಗಿ ನೀಡಿದ ಇದೊಂದೇ ಹೇಳಿಕೆ ರಾಜಣ್ಣ ರಾಜೀನಾಮೆಗೆ ಕಾರಣವಾಯಿತು ಎನ್ನಲಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯು ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

About The Author

You May Also Like

More From Author

+ There are no comments

Add yours