ಮೈಕ್ರೋಫೈನಾನ್ಸ್ ಕಿರುಕುಳ: ತುಮಕೂರಿನ ವ್ಯಕ್ತಿ ಸಾವು
Tumkur news
ತುಮಕೂರು: ಮೈಕ್ರೋ ಫೈನಾನ್ಸ್ನಿಂದ ಪಡೆದ ಸಾಲಕ್ಕಿಂತಲೂ ಹೆಚ್ಚು ಬಡ್ಡಿಯನ್ನೇ ಪಾವತಿಸಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಮೈಕ್ರೋಫೈನಾನ್ಸ್ ಹಾವಳಿ: ಇಂದು ಜಿಲ್ಲಾಧಿಕಾರಿ ಮಹತ್ವದ ಸಭೆ
ತುಮಕೂರು ನಗರದ ಲೇಬರ್ ಕಾಲೋನಿಯ ಸೈಯದ್ ಸಮಿವುಲ್ಲಾ ಮೃತ ದುರ್ದೈವಿ. ಫೈಸ್ ಸ್ಟಾರ್ ಎಂಬ ಮೈಕ್ರೋ ಫೈನಾನ್ಸ್ನಿಂದ ಮೃತ ಸೈಯದ್ ಸಮಿವುಲ್ಲಾ ಅವರು 2019ರಲ್ಲಿ 4.66 ಲಕ್ಷ ರೂ. ಮನೆ ಸಾಲ ಪಡೆದುಕೊಂಡಿದ್ದರು. 2024ರ ಮೇ ತಿಂಗಳವರೆಗೆ ಶೇ.24.55ರಂತೆ ಸುಮಾರು 7.20 ಲಕ್ಷ ರೂ. ಬಡ್ಡಿ ಹಣವನ್ನು ಕಟ್ಟಿದ್ದಾರೆ. ಅಸಲು ಹಣ ಹಾಗೆಯೇ ಉಳಿದಿತ್ತು. ಫೈನಾನ್ಸ್’ನವರು ಬಾಕಿ ಇರುವ ಅಸಲು ಹಣವನ್ನು ಪಾವತಿಸಲು ಒತ್ತಡ ಹೇರಿದ್ದರು ಎನ್ನಲಾಗಿದೆ.
ಫೈನಾನ್ಸ್ನವರ ಈ ಕಿರುಕುಳದಿಂದ ಸೈಯದ್ ಸಮಿವುಲ್ಲಾ ಆತಂಕಕ್ಕೆ ಒಳಗಾಗಿ ಕಳೆದ ಮೇ ತಿಂಗಳಿನಲ್ಲಿ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೃತರ ಪತ್ನಿ ಆರೋಪಿಸಿದ್ದಾರೆ.
ಸೈಯದ್ ಸಮಿವುಲ್ಲಾ ಮೃತಪಟ್ಟ ಬಳಿಕವೂ ಫೈನಾನ್ಸ್’ನವರು ಪದೇ ಪದೇ ಮನೆಗೆ ಬಂದು ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಮೃತನ ಪತ್ನಿ ತಬಸುಮ್ ದೂರಿದ್ದು, ಪತಿಯಂತೆ ನಾನೂ ಮಕ್ಕಳೊಂದಿಗೆ ಸಾಯಬೇಕಾಗುತ್ತದೆ ಅಳಲು ತೋಡಿಕೊಂಡಿದ್ದಾರೆ.
ತುಮಕೂರು: ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರು ಕಾರ್ಮಿಕರ ದುರ್ಮರಣ
+ There are no comments
Add yours