ದ್ವಿಚಕ್ರ ವಾಹನದಲ್ಲಿ 4 ಜನ ರೈಡ್, ಪೊಲೀಸರಿಗೆ ಅವಾಜ್!ನಾಲ್ವರು ಪುಂಡರ ಬಂಧನ
ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ನಾಲ್ವರು ಕಿಡಿಗೇಡಿಗಳ ಬಂಧನ
Tumkur news
ತುಮಕೂರು: ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೇ ಪೊಲೀಸರ ಮೇಲೆ ಹಲ್ಲೆ ನಡೆಸಿದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಸರಹದ್ದಿನ ರಾಣಿ ಚೆನ್ನಮ್ಮ ಸರ್ಕಲ್ ಬಳಿ ಇರುವ ರಿಂಗ್ ರಸ್ತೆಯಲ್ಲಿ ಜನವರಿ 27ರಂದು ಸಂಜೆ 07-30ರ ಸಮಯದಲ್ಲಿ ಘಟನೆ ನಡೆದಿದೆ.
ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಮಹಿಳಾ ಪಿ.ಎಸ್.ಐ. ಟಿ.ಎಸ್. ಚಂದ್ರಕಲಾ ಮತ್ತು ಎ.ಎಸ್.ಐ. ಮೋಹನ್ ಕುಮಾರ್ ಕೆ. ಹಾಗೂ ಸಿಬ್ಬಂದಿ ತಮ್ಮರಾಯ ಮಾಡಕರಿ ಅವರುಗಳು ಇಲ್ಲಿನ ರಾಣಿ ಚೆನ್ನಮ್ಮ ಸರ್ಕಲ್ ಬಳಿ ರಸ್ತೆ ಸಂಚಾರ ನಿಯಂತ್ರಣ ಮಾಡುತ್ತಾ ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನ ಚಾಲಕರುಗಳಿಗೆ ಸ್ಥಳ ದಂಡ ವಿಧಿಸುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ವೇಳೆ ಸರ್ವಿಸ್ ರಸ್ತೆಯಿಂದ ರಿಂಗ್ ರಸ್ತೆಗೆ KA-06-EV-3695 ನೇ ನಂಬರಿನ ಹೋಂಡಾ ಆಕ್ಟಿವಾ ಸ್ಕೂಟರ್’ನಲ್ಲಿ ಒಟ್ಟು 04 ಜನ ಯುವಕರುಗಳು ಒಂದೇ ದ್ವಿಚಕ್ರ ವಾಹನದಲ್ಲಿ ಕುಳಿತುಕೊಂಡು, ಯಾವುದೇ ಹೆಲೈಟ್ ಧರಿಸದೆ, ರಾಂಗ್ ರೂಟಿನಲ್ಲಿ ತಮ್ಮ ದ್ವಿಚಕ್ರ ವಾಹನ ಚಾಲನೆ ಮಾಡುತ್ತಾ ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಬಂದಿದ್ದಾರೆ. ಆಗ ಕರ್ತವ್ಯ ನಿರತ ಪೊಲೀಸರು ಯುವಕರನ್ನು ತಡೆದು ನಿಲ್ಲಿಸಿ ಸ್ಥಳ ದಂಡವನ್ನು ಪಾವತಿಸುವಂತೆ ಸೂಚಿಸಿದ್ದಾರೆ. ಆಗ 04 ಜನ ಯುವಕರು ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಸಾಲದಕ್ಕೆ ಪೊಲೀಸರನ್ನು ತಳ್ಳಿ ಕೆಳಗೆ ಬೀಳಿಸಿ ದುರ್ನಡತೆ ತೋರಿದ್ದಾರೆ. ಅಲ್ಲದೇ ಆ ಯುವಕರು ತಮ್ಮ ಮೊಬೈಲ್ ಪೋನ್ ಗಳಲ್ಲಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳು ಮಾಹಿತಿಯನ್ನು ವೈರಲ್ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ವಿವರ: 1) ಮೊಹಮದ್ ಇಸ್ಮಾಯಿಲ್ ಬಿನ್ ಮೊಹಮದ್ ನೂರುಲ್ಲಾ, ವಯಸ್ಸು: 20 ವರ್ಷ, TDPS ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ: ಸದಾಶಿವನಗರ ಬಡಾವಣೆ, ಅನ್ಸರ್ ಮಸೀದಿ ಹತ್ತಿರ, 4ನೇ ಮುಖ್ಯರಸ್ತೆ, 5ನೇ ಕ್ರಾಸ್, ತುಮಕೂರು ಟೌನ್.
2) ಮೊಹಮದ್ ಅಬ್ಬಾಸ್ ಬಿನ್ ಮೊಹಮದ್ ಅರ್ಷದ್, ವಯಸ್ಸು: 21 ವರ್ಷ, ವೆಬ್ ಸೈಟ್ ಡೆವಲಪರ್ ಕೆಲಸ, ಡಿಜಿಟಲ್ ಮಾರ್ಕೆಟಿಂಗ್, ವಾಸ: ಸದಾಶಿವನಗರ ಅಕರ್ಂ ಟೌನ್, ಟೂಡಾ ಲೇಔಟ್, ಅಕ್ಷಾ ಪಬ್ಲಿಕ್ ಸ್ಕೂಲ್ ಹಿಂಭಾಗ, ಮಹೀದ್ರ ಶೋರೂಂ ಹತ್ತಿರ, ತುಮಕೂರು ಟೌನ್.
3) ಅನ್ನಾನ್ ಅಹಮದ್ ಬಿನ್ ಸಗೀರ್ ಅಹಮದ್, ವಯಸ್ಸು: 22 ವರ್ಷ, ಬಟ್ಟೆ ಅಂಗಡಿ ವ್ಯಾಪಾರ, ವಾಸ: ಸದಾಶಿವನಗರ ಅಕರ್ಂ ಟೌನ್, ಟೂಡಾ ಲೇಔಟ್, ಅಕ್ಷಾ ಪಬ್ಲಿಕ್ ಸ್ಕೂಲ್ ಹಿಂಭಾಗ, ಮಹೀದ್ರ ಶೋರೂಂ ಹತ್ತಿರ, ತುಮಕೂರು ಟೌನ್.
4) ಮೊಹಮದ್ ಅಲೀ ಬಿನ್ ಗೌಸ್ ಮೋಹಿದ್ದೀನ್, ವಯಸ್ಸು: 19 ವರ್ಷ, ಬಟ್ಟೆ ಅಂಗಡಿಯಲ್ಲಿ ವ್ಯಾಪಾರ, ವಾಸ: ಸದಾಶಿವನಗರ ಅಕರ್ಂ ಟೌನ್, ಟೂಡಾ ಲೇಔಟ್, ಅಕ್ಷಾ ಪಬ್ಲಿಕ್ ಸ್ಕೂಲ್ ಹಿಂಭಾಗ, ಮಹೀದ್ರ ಶೋರೂಂ ಹತ್ತಿರ, ತುಮಕೂರು ಟೌನ್.
ವಾಹನ ವಶ, ಎಸ್.ಪಿ ವಾರ್ನಿಂಗ್: ಮೇಲ್ಕಂಡ ನಾಲ್ವರು ಯುವಕರ ಮೇಲೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಬಗ್ಗೆ ಪಿ.ಎಸ್.ಐ.ರವರು ನೀಡಿದ ದೂರಿನ ಮೇರೆಗೆ ತಿಲಕ್ ಪಾರ್ಕ್ . 2-15/2025 500 126(2),352,351(2),132 R/W 3(5) BNS & 500 194(A)(D)(E) IMV Act ರೀತ್ಯಾ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದು, ಸದರಿ 04 ಜನ ಯುವಕರನ್ನು ತಿಲಕ್ ಪಾರ್ಕ್ ವೃತ್ತದ ಸಿ.ಪಿ.ಐ. ಪುರುಷೋತ್ತಮ.ಜಿ. ಮತ್ತು ಅವರ ಸಿಬ್ಬಂದಿಗಳು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಅವರ KA-06-EV-3695 ನೇ ನಂಬರಿನ ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ಸಹಾ ವಶಪಡಿಸಿಕೊಳ್ಳಲಾಗಿದೆ.
ಇದೇ ರೀತಿ ವಿನಾಕಾರಣ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಕಿಡಿಗೇಡಿಗಳ ಮೇಲೆ ಕಾನೂನು ರೀತಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಎಚ್ಚರಿಸಿದ್ದಾರೆ.
ತುಮಕೂರು: ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರು ಕಾರ್ಮಿಕರ ದುರ್ಮರಣ
+ There are no comments
Add yours