ರೈಲಿಗೆ ತಲೆಕೊಟ್ಟು ಪೊಲೀಸ್ ಆತ್ಮಹತ್ಯೆ: ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Tumkurnews
ಗುಬ್ಬಿ: ಚಲಿಸುತಿದ್ದ ರೈಲಿಗೆ ತಲೆ ಕೊಟ್ಟು ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗುಬ್ಬಿ ರೈಲ್ವೆ ನಿಲ್ದಾಣದ ಸಮೀಪ ಶನಿವಾರ ನಡೆದಿದೆ. ಮೃತರನ್ನು ಶಿವಪ್ರಕಾಶ್ ಆರಾಧ್ಯ ಎಂದು ಗುರುತಿಸಲಾಗಿದ್ದು, ಮೃತ ಶಿವಪ್ರಕಾಶ್ ಆರಾಧ್ಯ ಅವರು ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ತುಮಕೂರು: ನಿವೇಶನ ರಹಿತರಿಗೆ ಶುಭ ಸುದ್ದಿ: ಜಿಲ್ಲಾಡಳಿತದಿಂದ ಮಹತ್ವದ ಹೆಜ್ಜೆ
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಯಶವಂತಪುರ ರೈಲ್ವೆ ಪೊಲೀಸ್ ಹಾಗೂ ಗುಬ್ಬಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.




+ There are no comments
Add yours