ತುಮಕೂರು; ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

Tumkurnews
ತುಮಕೂರು; ಮುಂದಿನ 2023 ರ ವಿಧಾನಸಭೆ ಹಾಗು 2024 ರ ಲೋಕಾಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಹಾಗು ವಿಧಾನಪರಿಷತ್ ಸದಸ್ಯ ನವೀನ್ ಅವರ ನೇತೃತ್ವದಲ್ಲಿ ಇಂದಿನಿಂದ ಜನವರಿ 12 ರವರೆಗೆ ಬೂತ್ ವಿಜಯ ಅಭಿಯಾನವನ್ನು ಆರಂಭಿಸಲಾಯಿತು.
ಸಿದ್ಧರಾಮೇಶ್ವರ ಬಡಾವಣೆ ಪಶ್ಚಿಮ 3ನೇ ಕ್ರಾಸ್ ನಲ್ಲಿರುವ 224ನೇ ಬೂತ್ ಅಧ್ಯಕ್ಷ ಜಗದೀಶ್ ಅವರ ಮನೆಯಿಂದ ಬೂತ್ ವಿಜಯ ಅಭಿಯಾನವನ್ನು ಅರಂಭಿಸಲಾಯಿತು. ಬೂತ್ ಕಮಿಟಿಯ ಸದಸ್ಯರುಗಳ ಪರಿಶೀಲನೆ, ಅವರನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಿತು
ಸಿದ್ದರಾಮೇಶ್ವರ ಬಡಾವಣೆಯ ವಾರ್ಡ್ ನಂ 35ಕ್ಕೆ ಒಳಪಟ್ಟ 224 ನೇ ಬೂತ್ ಅಧ್ಯಕ್ಷ ಜಗದೀಶ್ ಅವರ ಮನೆಯಲ್ಲಿ ಬೂತ್ ವಿಜಯ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ಜನವರಿ 2 ರಿಂದ 12 ವರೆಗೆ ಹತ್ತು ದಿನಗಳ ಕಾಲ ನಡೆಯುವ ಈ ಆಭಿಯಾನದಲ್ಲಿ 5 ಪ್ರಮುಖ ಕಾರ್ಯಕ್ರಮಗಳನ್ಬು ಹಾಕಿಕೊಂಡಿದೆ. ಬೂತ್ ಮಟ್ಟದ ಸದಸ್ಯರ ಕಾರ್ಯವೈಖರಿ, ಪಂಚರತ್ನ ತಂಡದ ಕಾರ್ಯಕ್ರಮಗಳ ಪರಿಶೀಲನೆ, ಪೇಜ್ ಮುಖಂಡರ ನೇಮಕ, 100 ಜನರನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ರಚನೆ , ವಾರ್ಡಿನ ಕನಿಷ್ಟ 25 ಜನ ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿಯು ಪಕ್ಷದ ಬಾವುಟ ಹಾಗೂ ಮನ್ ಕೀ ಬಾತ್ ವೀಕ್ಷಣೆ ಈ ಐದು ಕಾರ್ಯಗಳನ್ನು ಮಾಡುವ ಮೂಲಕ ಬೂತ್ ನ ಸಶಕ್ತಿಕರಣಗೊಳಿಸುವ ಉದ್ದೇಶ ಹೊಂದಲಾಗಿದೆ. ಇಂದಿನಿಂದ ರಾಷ್ಟ್ರದಾದ್ಯಂತ ಈ ಆಭಿಯಾನ ಆರಂಭವಾಗಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಡೆಯಲಿದೆ ಎಂದರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಜಿ.ಬಿ ಜೋತಿಗಣೇಶ್ ಮಾತನಾಡಿ, ಮುಂಬರುವ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇದು ಮಹತ್ವದ ಕಾರ್ಯಕ್ರಮವಾಗಿದ್ದು, ಬಿಜೆಪಿ ಕಾರ್ಯಕರ್ತರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿ ಮನೆಮನೆಗೆ ದೇಶಕ್ಕೆ ಬಿಜೆಪಿ ಪಕ್ಷ ಏಕೆ ಬೇಕು, ಪಕ್ಷದಿಂದ ಆಗಿರುವ ಕಾರ್ಯಕ್ರಮಗಳೇನು ಎಂಬುದರ ಅರಿವು ಮೂಡಿಸುವುದರ ಜೊತೆಗೆ, ನಮ್ಮ ಕಾರ್ಯಕರ್ತರನ್ನು ಸಕ್ರಿಯಗೊಳಿಸಿ, ಮತದಾರರ ಡಾಟಾಬೇಸ್ ಹೊಂದಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ 224 ನೇ ಬೂತ್ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ 224 ನೇ ವಾರ್ಡಿನ ಬೂತ್ ಕಮಿಟಿ ಅಧ್ಯಕ್ಷ ಜಗದೀಶ್, ಪಕ್ಷ ನೀಡಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ಸಿದ್ದರಿರುವುದಾಗಿ ತಿಳಿಸಿದರು.
ಬೂತ್ ಸಂಖ್ಯೆ-7, ಅಂತರಸನಹಳ್ಳಿಯಲ್ಲಿರುವ ಬಿಜೆಪಿ ಕಾರ್ಯಕರ್ತ ಸತೀಶ್ ಬಿಜೆಪಿ ನಗರ ಮಂಡಲ ಅಧ್ಯಕ್ಷ ಟಿ.ಎಚ್ ಹನುಮಂತರಾಜು, ಕಾರ್ಯದರ್ಶಿಗಳಾದ ರಾಜೀವ್ ಮತ್ತು ಗಣೇಶ್, ಉಪಾಧ್ಯಕ್ಷ ರಾದ ವಿರೂಪಾಕ್ಷಪ್ಪ, ಶಂಕರ್ ಗಂಗಾಧರ, ಯುವಮೋರ್ಚಾ ಅಧ್ಯಕ್ಷ ನಾಗೇಂದ್ರ, ಕೆ.ಪಿ.ಮಹೇಶ್, ಜೆ.ಜಗದೀಶ್ ಸೇರಿದಂತೆ 224 ನೇ ಬೂತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours