Tumkurnews
ತುಮಕೂರು; ಎನ್.ಎಸ್.ಯುಐ ಕಾರ್ಯಕರ್ತರ ಬಂಧನ ಖಂಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಸಚಿವ ಬಿ.ಸಿ ನಾಗೇಶ್ ನಿವಾಸದೆದುರು ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿರುವ ಎನ್.ಎಸ್.ಯು.ಐ ಕಾರ್ಯಕರ್ತರನ್ನು ನಗರ ಹೊರ ವಲಯದ ಅಣ್ಣೇನಹಳ್ಳಿ ಜಿಲ್ಲಾ ಕಾರಾಗ್ರಹದಲ್ಲಿ ಶನಿವಾರ ಭೇಟಿ ಮಾಡಿದ ಬಳಿಕ ಅವರು ಮಾತನಾಡಿದರು.
ಸಚಿವ ನಾಗೇಶ್ ಮನೆಗೆ ಬೆಂಕಿ ಪ್ರಕರಣ; ಬಿಜೆಪಿಯಿಂದ ಜಿಲ್ಲಾದ್ಯಂತ ಪ್ರತಿಭಟನೆ
ಕರ್ನಾಟಕ ರಾಜ್ಯ, ಭಾರತದ ಇತಿಹಾಸವನ್ನು ತಿರುಚೋಕೆ ನಾಗೇಶ್ ನೇತೃತ್ವದ ಇಲಾಖೆ ಹೊರಟಿದೆ. ಅದು ಸರಿಯಲ್ಲ, ಕುವೆಂಪು, ಬಸವಣ್ಣ, ನಾರಾಯಣಗುರು ಅವರಿಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ. ಯುವಕರು, ವಿದ್ಯಾರ್ಥಿಗಳು, ಮಠಾಧೀಶರು ಹೋರಾಟ ಮಾಡುತ್ತಿದ್ದಾರೆ.
ನಾಗೇಶ್ ಮನೆ ಮುಂದೆ ಅವರೇ ಅವರ ಚಡ್ಡಿಯನ್ನು ತೆಗೆದುಕೊಂಡು ಹೋಗಿ ಸುಟ್ಟಿರಬಹುದು. ಧಿಕ್ಕಾರ ಕೂಗಿದ್ದಾರೆ, ಅವರೇನು ಯಾರ ಮನೆ ಒಳಗೂ ಹೋಗಿಲ್ಲ.
ಇದ್ದ ಪೇಪರನ್ನು ಸುಟ್ಟಿದ್ದಾರೆ.
ಸಚಿವ ಬಿ.ಸಿ ನಾಗೇಶ್ ಮನೆ ಎದುರು ನಿಜಕ್ಕೂ ನಡೆದಿದ್ದೇನು?; ಇಲ್ಲಿದೆ ವಿಡಿಯೋ
ನಾವು ವಿಧಾನಸೌಧದಲ್ಲಿ ಪೇಪರ್ ಹರಿದುಹಾಕ್ತೀವಿ.
ಅವರೇನು ರಾಷ್ಟ್ರಧ್ವಜಕ್ಕೆ ಏನು ಅವಮಾನ ಮಾಡಿಲ್ಲ.
ನಾಗೇಶ್ ಮನೆಯ ಚಡ್ಡಿಯನ್ನು ಸುಟ್ಟಿಲ್ಲ. ಯಾರ ಮನೆಗೆ ಹೋಗಿ ಚಡ್ಡಿ ಕದ್ದು ತಂದು ಸುಟ್ಟಿಲ್ಲ.
ಇದು ಪ್ರತಿಭಟನೆಯ ಒಂದು ಸ್ವರೂಪ ಎಂದರು.
ಎಲ್ಲರಿಗೂ ಪ್ರತಿಭಟನೆಯ ಹಕ್ಕಿದೆ. ದೆಹಲಿಯಲ್ಲಿ ಮುಖ್ಯಮಂತ್ರಿ ಮನೆಗೆ ನುಗ್ಗಿದ್ದಾರೆ. ಅವು ಮೇಲೆ ಯಾವ ಕೇಸ್ ಹಾಕಿದ್ದಾರೆ.
ಶಿಕ್ಷಣ ಸಚಿವ ನಾಗೇಶ್ ಮನೆಗೆ ಬೆಂಕಿ ಹಚ್ಚುವ ಯತ್ನ; 15 ಮಂದಿ ಪೊಲೀಸ್ ವಶಕ್ಕೆ
ರಾಷ್ಟ್ರದ ರೈತ ಮುಖಂಡನ ಮೇಲೆ ಮೋದಿ ಅಂತಾ ಹೇಳಿಕೊಂಡು ಮಸಿ ಬಳೀತಾರೆ. ಅವರ ಮೇಲೆ ಯಾವ ಆಕ್ಷನ್ ತೆಗೆದುಕೊಂಡಿದ್ದಾರೆ. ಬೇಲ್ ಸಿಗಲೇಬಾರದು ಎಂದು ಸೆಕ್ಷನ್‌ಗಳನ್ನು ಹಾಕಿದ್ದಾರೆ. ಎಕ್ಸ್ ಪ್ಲೋಸಿವ್ ಅಂತೆ, ಎನು ಎಕ್ಸ್ ಪ್ಲೋಸಿವ್ ಮಾಡಿದ್ರು ಇವರು. ಘಟನೆ ನಡೆದ ತಕ್ಷಣ ಹೋಂ ಮಿನಿಸ್ಟರ್ ಹೋಗಿದ್ದಾರೆ. ಈ ಜಿಲ್ಲೆಯಲ್ಲಿ ಇಬ್ಬರು ದಲಿತರು ಸತ್ತಾಗ ಸಚಿವರು, ಶಾಸಕರು ಎಲ್ಲಿ ಹೋಗಿದ್ರು. ಯಾರಾದರು ದಲಿತರಿಗೆ ರಕ್ಷಣೆ ಕೊಡಲು ಹೋಗಿದ್ರಾ? ಈಗ ಮನೆಮನೆಗೆ ಹೋಗಿ ಸಿಕ್ಕ ಸಿಕ್ಕ 20 ಜನರನ್ನು ತಂದು ಹಾಕಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರೋಹಿತ್ ಚಕ್ರತೀರ್ಥ ವಿರುದ್ಧ ತೀವ್ರಗೊಂಡ ಆಕ್ರೋಶ; ಒಕ್ಕಲಿಗರ ಪ್ರತಿಭಟನೆ
ಪಠ್ಯ ಪುಸ್ತಕ ವಿಚಾರಕ್ಕೆ ನಿರ್ಮಲಾನಂದ ಸ್ವಾಮೀಜಿಗಳು, ಸಿದ್ದಗಂಗಾ ಶ್ರೀಗಳು, ಹೊನ್ನೇನಹಳ್ಳಿ ಶ್ರೀಗಳು ಮಾತನಾಡಿದ್ದಾರೆ. ಸಾಹಿತಿಗಳು ಮಾತನಾಡಿದ್ದಾರೆ, ಅವರೆಲ್ಲರ ಪ್ರೇರೇಪಣೆ ಈ ಹುಡುಗರಿಗೆ ಸಿಕ್ಕಿದೆ. ಈ ರಾಜ್ಯದಲ್ಲಿ ಅನ್ಯಾಯ ಅಧರ್ಮ, ಆಗುತ್ತಿದೆ, ಶಾಂತಿ ಭಂಗ ಉಂಟಾಗುತ್ತಿದೆ. ಬೇಲ್ ರಿಜೆಕ್ಟ್ ಆಗಿದೆ, ಮೇಲಿನ ಕೋರ್ಟ್ ಗೆ ಹೋಗುತ್ತಾರೆ. ಇದು ಅವರಿಗೇನು ಅವಮಾನ ಅಲ್ಲ. ಇದು ಹೋರಾಟದ ಸ್ವರೂಪ. ಶಿವಮೊಗ್ಗದಲ್ಲಿ ನಡೆಯಲಿಲ್ವಾ, ಲೂಟಿ ಮಾಡಿದ್ರು, ಅಲ್ಲಿ ಯಾಕೆ ಕೇಸು ಹಾಕಿಲ್ಲ. ಎಷ್ಟೋ ಜನ ಸತ್ತರು, ಅವರ ಮೇಲೆ ಯಾಕೆ ಕೇಸು ಹಾಕಿಲ್ಲ. ಯಾರ್ಯಾರು ಅಧಿಕಾರಿಗಳು ರಾಜಕಾರಣಿಗಳ ಮಾತು ಕೇಳಿ ಇಂಥ ಸುಳ್ಳು ಸೆಕ್ಷನ್‌ಗಳನ್ನು ಹಾಕಿದ್ದೀರಿ.
ಪಠ್ಯ ಪುಸ್ತಕವಾಯ್ತು, ಈಗ ಸರ್ಕಾರಿ ಕಾರ್ಯಕ್ರಮಗಳಿಗೂ ರೋಹಿತ್ ಚಕ್ರತೀರ್ಥ ಪ್ರಮುಖ ಅತಿಥಿ!
ನೀವು ಮುಂದೆ ಒಂದಿನ ಇದಕ್ಕೆಲ್ಲಾ ಉತ್ತರ ಕೊಡಬೇಕಾಗುತ್ತೆ, ಶಿಕ್ಷೆಯನ್ನ ಅನುಭವಿಸ್ತೀರಾ ಎಂದು
ಪೊಲೀಸ್ ಅಧಿಕಾರಿಗಳಿಗೆ ಡಿಕೆಶಿ ಎಚ್ಚರಿಕೆ ನೀಡಿದರು.
ಏನು ಮನೆಗೆ ಬೆಂಕಿ ಹಾಕಿದ್ದಾರಾ, ತೋರಿಸಲಿ ವೀಡಿಯೋ. ನಮ್ಮ ಬಳಿಯೂ ವೀಡಿಯೋ ಇದೆ, ಚಡ್ಡಿಗೆ ಬೆಂಕಿ ಹಾಕಿರೋದು ಅವರು. ಅದು ಆರ್.ಎಸ್.ಎಸ್ ಸಮವಸ್ತ್ರ ಅಲ್ಲ, ಬಂಧಿತ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಎಕ್ಸಾಂ ಇದೆ, ಆಡಳಿತ ಪಕ್ಷಕ್ಕೆ ಪೊಲೀಸರು ಮಣಿಯುತ್ತಿದ್ದಾರೆ.
ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಮಾಡಿಕೊಳುತ್ತಿದ್ದಾರೆ ಎಂದು ತುಮಕೂರಿನ ಊರುಕೆರೆಯ ಅಣ್ಣೇನಹಳ್ಳಿಯ ಜಿಲ್ಲಾ ಕಾರಾಗೃಹ ಬಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ಸರ್ಕಾರದ ವಿರುದ್ಧ ಹರಿಹಾಯ್ದರು.
ಅಲ್ಪಸಂಖ್ಯಾತರನ್ನು ಎಲ್ಲಾ ವಲಯಗಳಲ್ಲಿ ಕಾಂಗ್ರೆಸ್ ರಕ್ಷಣೆ ಮಾಡಲಿದೆ; ಡಿಕೆಶಿ ಭರವಸೆ
+ There are no comments
Add yours