Tumkurnews
ತುಮಕೂರು; ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ವಸತಿ ಪದವಿ ಪೂರ್ವ ಕಾಲೇಜುಗಳ ಉಚಿತ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಬಯಸುವವರು ಅಲ್ಪ ಸಂಖ್ಯಾತರ ಸಮುದಾಯಕ್ಕೆ ಸೇರಿದವಾಗಿದ್ದು, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಮತ್ತು ಸಿಖ್ ಸಮುದಾಯದವರಿಗೆ ಶೇ. 75ರಷ್ಟು ಪ್ರವೇಶ ಮೀಸಲಿರಿಸಿದೆ. ಅಲ್ಪ ಸಂಖ್ಯಾತರ ಯಾವುದೇ ವಸತಿ ಶಾಲೆ, ಸರ್ಕಾರಿ, ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ಅಧ್ಯಯನ ಮಾಡಿ ಉತ್ತೀರ್ಣರಾಗಿರಬೇಕು. ಕರ್ನಾಟಕದವರಾಗಿದ್ದು, ಕುಟುಂಬದ ವಾರ್ಷಿಕ ಆದಾಯವು 2.50 ಲಕ್ಷ ರೂ.ಗಳನ್ನು ಮೀರಿರಬಾರದು.
ಮೀನುಗಾರಿಕೆ ಇಲಾಖೆ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ವಿಕಲಚೇತನರಿಗೆ ಶೇ. 3 ರಷ್ಟು ಪ್ರವೇಶ ಮೀಸಲಿರಿಸಿದ್ದು, ಶೇ. 25 ರಷ್ಟು ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಲಾಗಿದೆ. 2022-23ನೇ ಸಾಲಿನ ಪ್ರಥಮ ಪಿ.ಯು.ಸಿ.ಗೆ ಅಲ್ಪಸಂಖ್ಯಾತರ ಸಮುದಾಯಕ್ಕೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಮತ್ತು ಸಿಖ್) ಸೇರಿದ ವಿದ್ಯಾರ್ಥಿಗಳು ಮೇ 31, ಸಂಜೆ 5.30 ರೊಳಗೆ ಮಾಹಿತಿ ಕೇಂದ್ರ ಅಥವಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಮೂಲಕ ಉಚಿತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಮಾಹಿತಿಗಾಗಿ ಜಿಲ್ಲೆಯ ಶಿರಾ ತಾಲ್ಲೂಕಿನ ಭುವನಹಳ್ಳಿ, ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಕಾಲೇಜಿನ ಪ್ರಾಂಶುಪಾಲರಾದ ಕು. ಗೀತಾ ಎ.ಎಸ್. (ಮೊ.ಸಂ. 9481819093) ಸಂಪರ್ಕಿಸಬಹದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕಲಚೇತನರಿಗೆ ಸರ್ಕಾರಿ ಸೌಲಭ್ಯ ತಲುಪಿಸಲು ಸಹಾಯವಾಣಿ ಆರಂಭ
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours