https://chat.whatsapp.com/Haj1IrKLgZpAIglCBfQbtB" alt="" width="397" height="133" />
ತುಮಕೂರು ನ್ಯೂಸ್.ಇನ್
Tumkurnews.in
ತುಮಕೂರು ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 59 ಜನರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 991ಕ್ಕೆ ಏರಿದೆ. ಅಲ್ಲದೇ ಮೂವರು ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 38ಕ್ಕೆ ಏರಿದೆ.
*
ಇಂದಿನ ಸೋಂಕಿತರ ತಾಲೂಕುವಾರು ವಿವರ
ತುಮಕೂರು- 22
ಗುಬ್ಬಿ- 7
ಕುಣಿಗಲ್- 5
ಮಧುಗಿರಿ- 8
ಪಾವಗಡ- 1
ಶಿರಾ- 1
ತಿಪಟೂರು- 7
ಚಿಕ್ಕನಾಯಕನಹಳ್ಳಿ- 2 ಕೊರಟಗೆರೆ- 1
ತುರುವೇಕೆರೆ- 5
ಒಟ್ಟು- 59
*
ಇಂದು 35 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 523 ಮಂದಿ ಗುಣಮುಖರಾಗಿದ್ದಾರೆ. 430 ಮಂದಿ ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
*
ಮೂರು ಸಾವು: ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಸರಣಿ ಮುಂದುವರೆದಿದೆ. ತುಮಕೂರು ನಗರದ ಗಂಗೋತ್ರಿ ನಗರದ 70 ವರ್ಷದ ಗಂಡು ಜು.22ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಗಂಟಲು ಮಾದರಿಯನ್ನು ತಪಾಸಣೆಗೆ ಒಳಪಡಿಸಿದ್ದು ಪಾಸಿಟಿವ್ ಬಂದಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಿಸದೆ ಜು.23ರಂದು ಸಾವನ್ನಪ್ಪಿದ್ದಾರೆ.
ಮಾರ್ಗ ಮಧ್ಯೆ ಸಾವು: ಕೊರಟಗೆರೆ ತಾಲ್ಲೂಕಿನ ಕಲ್ಕೆರೆ ಗ್ರಾಮದ 68 ವರ್ಷದ ವ್ಯಕ್ತಿ ಉಸಿರಾಟ ಮತ್ತು ಕಫದ ಸಮಸ್ಯೆಯಿಂದ ಬಳಲುತ್ತಿದ್ದು, ಜು.23ರಂದು ಕೊರಟಗೆರೆಯ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿಂದ ಸಾರ್ವಜನಿಕ ಆಸ್ಪತ್ರೆಗೆ ಕಳಿಸಲಾಗಿತ್ತು, ಮಾರ್ಗಮಧ್ಯದಲ್ಲಿ ಅವರು ಸಾವನ್ನಪ್ಪಿದರು. ಅವರ ತಪಾಸಣೆ ವರದಿ ಪಾಸಿಟಿವ್ ಬಂದಿದೆ.
ಕುಣಿಗಲ್ ಹೌಸಿಂಗ್ ಬೋರ್ಡ್ ನಿವಾಸಿ 75 ವರ್ಷದ ಪುರುಷ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಯೇ ಮೃತಪಟ್ಟಿದ್ದಾರೆ.
+ There are no comments
Add yours