ಚಿಕಿತ್ಸೆ ಫಲಿಸದೆ ಇಬ್ಬರು ಕೊರೋನಾ ಸೋಂಕಿತರು ಸಾವು, 23 ಹೊಸ ಪ್ರಕರಣ

1 min read

 

ತುಮಕೂರು ನ್ಯೂಸ್.ಇನ್
Tumkurnews.in(ಜು.18)

ತುಮಕೂರು ಜಿಲ್ಲೆಯಲ್ಲಿ 23 ಮಂದಿಗೆ ಹೊಸದಾಗಿ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 653ಕ್ಕೆ ಏರಿದೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

ತಾಲೂಕುವಾರು ಮಾಹಿತಿ:
ತುಮಕೂರು- 16
ಕುಣಿಗಲ್- 03
ಕೊರಟಗೆರೆ- 02
ಚಿಕ್ಕನಾಯಕನಹಳ್ಳಿ- 01
ಗುಬ್ಬಿ- 01
ಒಟ್ಟು- 23

ತುರುವೇಕೆರೆ, ತಿಪಟೂರು, ಮಧುಗಿರಿ, ಶಿರಾ, ಪಾವಗಡದಲ್ಲಿ ಹೊಸ ಪ್ರಕರಣ ಕಂಡು ಬಂದಿಲ್ಲ. ಇಂದು 20 ಮಂದಿ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಒಟ್ಟು 346 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎರಡು ಸಾವು: ತುಮಕೂರು ಜಯನಗರ ಬಡಾವಣೆಯ 58 ವರ್ಷದ ಮಹಿಳೆ ಚಿಕಿತ್ಸೆ ಫಲಿಸದೆ ಜು.16 ರಂದು ಮೃತ ಪಟ್ಟಿದ್ದಾರೆ.
ಸದಾಶಿವ ನಗರದ 23 ವರ್ಷದ ಮಹಿಳೆ ಜು.13 ರಂದು ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾರೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ಶನಿವಾರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 20 ಮಂದಿ ಸಾವಿಗೀಡಾಗಿದ್ದಾರೆ.

You May Also Like

More From Author

+ There are no comments

Add yours