ಚಿಕಿತ್ಸೆ ಫಲಿಸದೆ ಸೋಂಕಿತ ಸಾವು, 565ಕ್ಕೆ ಏರಿದ ಕೊರೋನಾ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ತುಮಕೂರು ನ್ಯೂಸ್. ಇನ್
(ಜು.14) tumkurnews.in

ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 52 ಜನರಲ್ಲಿ ಕೊರೋನಾ ಸೋಂಕು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 565ಕ್ಕೆ ಏರಿದೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

ತಾಲ್ಲೂಕುಗಳ ವಿವರ:
ತುಮಕೂರು 31
ತುರುವೇಕೆರೆ 05
ಕುಣಿಗಲ್ ‌02
ಶಿರಾ 01
ಪಾವಗಡ 04
ತಿಪಟೂರು 05
ಕೊರಟಗೆರೆ 01
ಮಧುಗಿರಿ ‌01
ಚಿಕ್ಕನಾಯಕನಹಳ್ಳಿ 02
ಒಟ್ಟು 52 ಪ್ರಕರಣಗಳು, ಗುಬ್ಬಿ ತಾಲ್ಲೂಕಿನಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡು ಬಂದಿಲ್ಲ.
*
ಪೊಲೀಸ್ ಠಾಣೆ ಸೀಲ್ ಡೌನ್: ಹೊಸ ಸೋಂಕಿತರ ಪೈಕಿ 10 ಜನ ಪೊಲೀಸರಾಗಿದ್ದಾರೆ. ಸಿಬ್ಬಂದಿಗೆ ಸೋಂಕು ತಗಲಿದ ಹಿನ್ನೆಲೆಯಲ್ಲಿ ತುಮಕೂರು ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯನ್ನು ಹಾಗೂ ಬಾರ್ ಲೈನ್ ರಸ್ತೆಯ ಪೊಲೀಸ್ ಕ್ವಾಟ್ರಸ್ ಅನ್ನು ಸೀಲ್ ಡೌನ್ ಮಾಡಲಾಗಿದ್ದು, ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾಗಿದೆ.

*
ಹೊಸ ಸೋಂಕಿತರಲ್ಲಿ ಓರ್ವ ಸರ್ಕಾರಿ ಅಧಿಕಾರಿಯಾಗಿದ್ದಾರೆ. 11 ಜನರಲ್ಲಿ ಸೋಂಕಿನ ಲಕ್ಷಣಗಳಿವೆ, 48 ಜನರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ, ಜೈಲಿನಲ್ಲೂ ಒಬ್ಬರಿಗೆ ಸೋಂಕು ತಗಲಿದೆ.
*
ಒಂದು ಸಾವು: ತುಮಕೂರು ‌ನಗರದ 52 ವರ್ಷ ವಯಸ್ಸಿನ ಪುರುಷ ಜು.13 ರಂದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
*
ಪರಿಸ್ಥಿತಿ ಹೇಗಿದೆ?:
ಮಂಗಳವಾರ ಜಿಲ್ಲೆಯಲ್ಲಿ ಹೊಸ 52 ಪ್ರಕರಣಗಳು ಸೇರಿ ಒಟ್ಟು 565 ಪ್ರಕರಣಗಳು ಪಾಸಿಟಿವ್ ಬಂದಿವೆ. ಇದರಲ್ಲಿ ಮಂಗಳವಾರ 17 ಮಂದಿ ಗುಣಮುಖರಾಗಿದ್ದು, ಈವರೆಗೂ ಒಟ್ಟು 154 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ‌16 ಮಂದಿ ಸಾವಿಗೀಡಾಗಿದ್ದಾರೆ. ಉಳಿದ 395 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

About The Author

You May Also Like

More From Author

+ There are no comments

Add yours