48 ಗಂಟೆಯಲ್ಲಿ 303 ಜನರಿಗೆ ಕ್ವಾರಂಟೈನ್, ಶಾಕ್ ನಲ್ಲಿ ಜನ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ತುಮಕೂರು, (ಜೂ.23) tumkurnews.in:
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಬಗ್ಗೆ ಜನರು ನಿರ್ಲಕ್ಷ್ಯ ಮಾಡಿದಷ್ಟೂ ಸೋಂಕು ಜನರಿಗೆ ಹತ್ತಿರವಾಗುತ್ತಿದೆ.
ಕಳೆದ 48 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 7 ಜನರಿಗೆ ಸೋಂಕು ದೃಢಪಟ್ಟಿದೆ, ಒಂದು ಸಾವು ಸಂಭವಿಸಿದ್ದು, 303 ಜನರನ್ನು ಕ್ವಾರಂಟೈನ್ ಮಾಡಲಾಗಿದೆ!

ಜೂ.22 ರಂದು ಪಾಸಿಟಿವ್ ಬಂದ ಸಿರಾ ತಾಲ್ಲೂಕಿನ ಹೊಸೂರು ಗ್ರಾಮದ 44 ವರ್ಷದ ಮಹಿಳೆಯೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕದಲ್ಲಿದ್ದ 43 ಜನ ಹಾಗೂ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ಪಾಸಿಟಿವ್ ಬಂದ 20 ವರ್ಷದ ಯುವಕನ ಸಂಪರ್ಕದಲ್ಲಿದ್ದ 46 ಜನರನ್ನು ಸೇರಿ ಒಂದೇ ದಿನ 89 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಜೂ.23 ರ ಮಂಗಳವಾರ ಒಂದೇ ದಿನ 214 ಜನರನ್ನು ಕ್ವಾರಂಟೈನ್ ಮಾಡಲಾಗಿದೆ! ಇದು ಈವರೆಗೆ ಒಂದೇ ದಿನ ಅತಿ ಹೆಚ್ಚು ಜನ ಕ್ವಾರಂಟೈನ್ ಆದ ದಾಖಲೆಯಾಗಿದೆ.

ಮಧುಗಿರಿ ಎಲ್.ಐ.ಸಿ ಕಚೇರಿ ಸಮೀಪದ 31 ವರ್ಷದ ಸೋಂಕಿತ ಪುರುಷನ ಸಂಪರ್ಕದಿಂದ 8 ಜನ ಹಾಗೂ ಅಚ್ಚನಹಳ್ಳಿಯ 29 ವರ್ಷದ ಪುರುಷನೊಂದಿಗೆ ಸಂಪರ್ಕ ಹೊಂದಿದ್ದ 40 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಚಿಕ್ಕನಾಯಕನಹಳ್ಳಿ ಗೋಡೆಗೆರೆ ಗೊಲ್ಲರಹಟ್ಟಿಯ 21 ವರ್ಷದ ಸೋಂಕಿತ ಯುವಕನ ಸಂಪರ್ಕದಲ್ಲಿದ್ದ 8 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ.

ಇಷ್ಟು ದಿನಗಳ ಕಾಲ ಕೋವಿಡ್ 19 ಮುಕ್ತವಾಗಿದ್ದ ಕೊರಟಗೆರೆ ತಾಲೂಕಿನಲ್ಲಿ 26 ವರ್ಷದ ಯುವತಿಯಲ್ಲಿ ಪಾಸಿಟಿವ್ ಬಂದಿದೆ. ಈಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 58 ಮಂದಿ ಹಾಗೂ ದ್ವಿತೀಯ ಹಂತದ ಸಂಪರ್ಕದಲ್ಲಿದ್ದ 100 ಮಂದಿ ಸೇರಿ ಒಟ್ಟು 158 ಜನರನ್ನು ಕ್ವಾರಂಟೈನ್ ಮಾಡಲಾಗಿದೆ‌. ಜೂ.23 ರಂದು ಒಂದೇ ದಿನ 214 ಜನರನ್ನು ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ, ಇದು ಕೂಡ ದಾಖಲೆಯಾಗಿದ್ದು, ಕೆಟ್ಟ ಸುದ್ದಿ ಮೂಲಕ ದಾಖಲೆಯಾಗುತ್ತಿರುವುದು ಬೇಸರದ ಸಂಗತಿ. ಜನರು ಇನ್ನಾದರೂ ಎಚ್ಚೆತ್ತುಕೊಂಡು ಜಾಗೃತಿ ವಹಿಸಬೇಕಿದೆ.

About The Author

You May Also Like

More From Author

+ There are no comments

Add yours