ಕೊರೋನಾಗೆ ತುಮಕೂರಿನಲ್ಲಿ ಓರ್ವ ಬಲಿ, ಒಂದೇ ದಿನ 5 ಪಾಸಿಟಿವ್

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ತುಮಕೂರು, (ಜೂ.23) tumkurnews.in
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಜನರನ್ನು ಆಕ್ರಮಿಸಿಕೊಳ್ಳುತ್ತಿದೆ.
ಇವತ್ತೊಂದೇ ದಿನ ಐದು ಜನರಲ್ಲಿ ಕೋವಿಡ್ 19 ಪಾಸಿಟಿವ್ ಬಂದಿದ್ದು, ಓರ್ವ ಸಾವನ್ನಪ್ಪಿದ್ದಾರೆ.
ತುಮಕೂರು ನಗರದ ಪಿ.ಎಚ್ ಕಾಲನಿಯ 56 ವರ್ಷದ ಪುರುಷ ಜೂನ್ 22 ರಂದು ಉಸಿರಾಟದ ತೊಂದರೆಯಿಂದ ಬಳಲಿ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಇವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಅದೇ ದಿನ ಗಂಟಲು ದ್ರವ ಮಾದರಿಯ ತಪಾಸಣೆ ಮಾಡಲಾಗಿತ್ತು. ಜೂ.23 ರಂದು ಮಧ್ಯಾಹ್ನ 12.45 ಕ್ಕೆ ಹೃದಯ ಸ್ಥಂಭನದಿಂದ ಸಾವನ್ನಪ್ಪಿದ್ದಾರೆ. ಬಳಿಕ ಕೋವಿಡ್ ಪರೀಕ್ಷೆ ವರದಿ ಬಂದಿದ್ದು, ಪಾಸಿಟಿವ್ ದೃಢಪಟ್ಟಿದೆ. ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ.
ಘಟನೆ ಬೆನ್ನಲ್ಲೇ ನಗರದಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಪಿ.ಎಚ್ ಕಾಲನಿಯನ್ನು ಪುನಃ ಕಂಟೋನ್ಮೆಂಟ್ ಜೋನ್ ಮಾಡುವ ಸಾಧ್ಯತೆ ಇದೆ.

ಇದಲ್ಲದೇ ಮಧುಗಿರಿ ತಾಲೂಕಿನಲ್ಲಿ ಎರಡು ಜನರಿಗೆ ಸೋಂಕು ತಗಲಿದೆ. ಎಲ್.ಐ.ಸಿ ಕಚೇರಿ ಸಮೀಪದ ನಿವಾಸಿ 31 ವರ್ಷದ ಪುರುಷ ಪುಣೆಯಿಂದ ಬಂದಿದ್ದನು, ಈತನಿಗೆ ಸೋಂಕು ದೃಢಪಟ್ಟಿದೆ.
ತಾಲೂಕಿನ ಅಚ್ಚೇನಹಳ್ಳಿಯ 29 ವರ್ಷದ ಯುವಕನಿಗೆ ಪಾಸಿಟಿವ್ ಬಂದಿದೆ.

ಕೊರಟಗೆರೆ ತಾಲೂಕಿನಲ್ಲಿ ಇದೇ ಮೊದಲ ಪ್ರಕರಣದಲ್ಲಿ ಪಾಸಿಟಿವ್ ಬಂದಿದೆ. ಕೆ.ನಾಗೇನಹಳ್ಳಿ ಗ್ರಾಮದ 26 ವರ್ಷದ ಯುವತಿಗೆ ಕೋವಿಡ್ ತಗಲಿದೆ.
ಚಿಕ್ಕನಾಯಕನಹಳ್ಳಿ ತಾಲೂಕು ಗೋಡೆಕೆರೆ, ಗೊಲ್ಲರಹಟ್ಟಿಯ 21 ವರ್ಷದ ಯುವಕನಲ್ಲಿ ಸೋಂಕು ಕಂಡು ಬಂದಿದೆ.

About The Author

You May Also Like

More From Author

+ There are no comments

Add yours