ತುಮಕೂರು, (ಜೂ.21) tumkurnews.in:
ನಾನು ಪ್ರತಿನಿತ್ಯ ಬೆಳಗಿನ ಜಾವ 4 ಗಂಟೆಗೆ ಎದ್ದು, 2 ಗಂಟೆಗಳ ಕಾಲ ಯೋಗಭ್ಯಾಸದಲ್ಲಿ ತೊಡಗುತ್ತೇನೆ. ಯೋಗಾಭ್ಯಾಸದಿಂದ 80ನೇ ವಯಸ್ಸಿನಲ್ಲಿಯೂ ನನ್ನ ಆರೋಗ್ಯ ಉತ್ತಮವಾಗಿದೆ ಎಂದು ಸಂಸದ ಜಿ.ಎಸ್ ಬಸವರಾಜ್ ತಮ್ಮ ಆರೋಗ್ಯದ ಗುಟ್ಟು ರಟ್ಟು ಮಾಡಿದರು.
ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ತಮ್ಮ ಮನೆಯಲ್ಲಿ ಯೋಗಾಭ್ಯಾಸ ಮಾಡಿದ ಬಳಿಕ ಅವರು ಮಾತನಾಡಿ, ಯುವ ಜನತೆಯು ದುಶ್ಚಟಗಳಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಒತ್ತಡದ ಜೀವನವನ್ನು ನಿರ್ವಹಣೆ ಮಾಡಲಾರದೇ ಅನಾರೋಗ್ಯಕ್ಕೆ ಒಳಗಾಗುವವರ ಸಂಖ್ಯೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆಹಾರ ಕ್ರಮದಲ್ಲಿ ಕಟ್ಟಿನಿಟ್ಟಿನ ಆಚರಣೆ ಮಾಡುವುದರ ಜೊತೆಗೆ ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವುದರ ಮೂಲಕ ಯುವ ಸಮೂಹ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ರಾಜಕೀಯ ಜೀವನವು ಅತ್ಯಂತ ಒತ್ತಡದಿಂದ ಕೂಡಿರುತ್ತದೆ. ಯಾವೊಬ್ಬ ರಾಜಕಾರಣಿಯು ಆರೋಗ್ಯದ ಬಗ್ಗೆ ಕಾಳಜಿವಹಿಸಲು ಸಾಧ್ಯವಾಗುವುದಿಲ್ಲ. ನನ್ನ ಯೋಗ ಗುರುಗಳು ಬಿ.ಕೆ.ಎಸ್. ಅಯ್ಯಂಗಾರ್ ಮತ್ತು ಬಾಬ ರಾಮ್ ದೇವ್ ಎಂದು ತಿಳಿಸಿದರು.
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿರವರು ಸಹ ಯೋಗ ಪಟುವಾಗಿದ್ದು, ಇವರ ಆರೋಗ್ಯದ ಗುಟ್ಟು ಸಹ ಯೋಗವೇ ಆಗಿದೆ. ಒಂದು ದಿನವು ಅನಾರೋಗ್ಯಕ್ಕೆ ಒಳಗಾಗದೇ ಕಳೆದ 6 ವರ್ಷಗಳಿಂದ ಆಡಳಿತ ನಡೆಸುತ್ತಿದ್ದಾರೆ. ಭಾರತೀಯರು ಕಂಡು ಹಿಡಿದ ಯೋಗವಿದ್ಯೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬ್ರಾಂಡ್ ಮಾಡಿದ ಕೀರ್ತಿ ನರೇಂದ್ರ ಮೋದಿರವರಿಗೆ ಸಲ್ಲಬೇಕೆಂದರು.
ಪ್ರತಿಯೊಬ್ಬರು ಯೋಗವನ್ನು ಮಾಡುವುದರ ಮೂಲಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಿ ಎಂದು ಸಂಸದ ಜಿ.ಎಸ್. ಬಸವರಾಜ್ ತಿಳಿಸಿದರು.
+ There are no comments
Add yours