ತುಮಕೂರು ನ್ಯೂಸ್.ಇನ್ (ಜೂ.17):
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2020-21ನೇ ಸಾಲಿನಲ್ಲಿ ಜಿಲ್ಲೆ ಪಾವಗಡ ತಾಲ್ಲೂಕಿನ ಪಳವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಡಿಕುಂಟೆಯಲ್ಲಿ ನೀರಿನ ಕೊಳ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಈ ಕಾಮಗಾರಿಯಿಂದ ಸುತ್ತಮತ್ತಲಿನ ಗ್ರಾಮಗಳ ಕಾರ್ಮಿಕರಿಗೆ ಕೆಲಸ ದೊರೆತಿದೆ. ಈ ಕಾಮಗಾರಿಯ ಅಂದಾಜು ಮೊತ್ತ 5 ಲಕ್ಷ ರೂಪಾಯಿಗಳಾಗಿರುತ್ತದೆ. ಅದರಲ್ಲಿ ಕೂಲಿ ವೆಚ್ಚ 2,90,000 ರೂ. ಸಾಮಗ್ರಿ ವೆಚ್ಚ 2,10,000 ರೂಪಾಯಿಗಳಾಗಿರುತ್ತದೆ.
ಈ ಕಾಮಗಾರಿಯಿಂದಾಗಿ ಒಬ್ಬ ಅಕುಶಲ ಕೂಲಿ ಕಾರ್ಮಿಕನಿಗೆ 275 ರೂಪಾಯಿಗಳಂತೆ ಒಟ್ಟು 1054 ಮಾನವ ದಿನಗಳ ಸೃಜನೆಯಾಗಲಿದೆ. ಗ್ರಾಮದ ಸುತ್ತಮುತ್ತಲಿನ ಅನೇಕ ಕುಟುಂಬಗಳಿಗೆ ನರೇಗಾ ಯೋಜನೆಯಡಿ ಕೂಲಿ ಕೆಲಸ ಒದಗಿಸಲಾಗಿದ್ದು, 85 ಕುಟುಂಬಗಳಿಗೆ ಉದ್ಯೋಗ ಖಾತರಿ ಯೋಜನೆಯು ವರದಾನವಾಗಿದೆ. ನೀರಿನ ಕೊಳ ನಿರ್ಮಾಣ ಕಾಮಗಾರಿಯಿಂದಾಗಿ ಒಟ್ಟು 2,90,000 ರೂಪಾಯಿಗಳು ಕೆಲಸ ನಿರ್ವಹಿಸಿದ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
+ There are no comments
Add yours