6 ಜನರಿಗೆ ಕೋವಿಡ್ 19 ಸೋಂಕು ಹರಡಿದವನ ವಿರುದ್ಧ ಕೇಸು ದಾಖಲು

1 min read

 

ತುಮಕೂರು ನ್ಯೂಸ್.ಇನ್, ಜೂ.14 : ಕೋವಿಡ್ 19 ಸೋಂಕು ಹರಡಲು ಕಾರಣನಾದ ಸಿರಾದ ವ್ಯಕ್ತಿಯ ವಿರುದ್ಧ ಪೆÇಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಮಾರ್ಚ್ 3, 2020ರ ಆದೇಶದಂತೆ ಸಿರಾ ನಗರವನ್ನು ಕಂಟೋನ್ಮೆಂಟ್ ಪ್ರದೇಶ ಎಂದು ಸರಕಾರ ಘೋಷಣೆ ಮಾಡಿ ರೋಗ ನಿರೋಧಕ ನಿರ್ಬಂಧದ ಸ್ಥಿತಿಯಲ್ಲಿಡಲು ಶ್ರಮಿಸುತ್ತಿತ್ತು. ಆದರೆ ಸರಕಾರದ ಆದೇಶ ಉಲ್ಲಂಘಿಸಿ, ಸೇವಾಸಿಂಧು ಆ್ಯಪ್‍ನಲ್ಲಿ ನೋಂದಣಿ ಮಾಡಿಕೊಳ್ಳದೇ ಸಿರಾ ನಗರದ ನಾಯಕರಹಟ್ಟಿ ವೃತ್ತದಲ್ಲಿ ಪಾತ್ರೆ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ(ಪಿ-5813) ನೆರೆಯ ಆಂಧ್ರಪ್ರದೇಶಕ್ಕೆ ಹೋಗಿ ಬಂದಿದ್ದನು.
ಮೇ 30ರಂದು ಈತ ಬೈಕ್‍ನಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದುಪುರ ಟೌನ್‍ನ ಮುಕ್ಕಡಿಪೇಟೆಯಲ್ಲಿರುವ ತನ್ನ ಮಾವನ ಮನೆಗೆ ತೆರಳಿದ್ದನು. ಬಳಿಕ ಅಲ್ಲಿಂದ ಜೂ.2ರಂದು ಹೆಂಡತಿ ಹಾಗೂ ಮಕ್ಕಳೊಂದಿಗೆ ಅದೇ ಬೈಕ್‍ನಲ್ಲಿ ಸಿರಾಗೆ ವಾಪಾಸು ಬಂದಿದ್ದನು. ಮೂರು ದಿನದ ಬಳಿಕ ಜೂ.5ರಂದು ಈತನಿಗೆ ಕೆಮ್ಮು, ನೆಗಡಿ, ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿದ್ದು, ಮರುದಿನ ಜೂ.6ರಂದು ಸಿರಾ ಸರಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡಿದ್ದಾನೆ. ಆಗ ಆತನನ್ನು ಕೋವಿಡ್ 19 ತಪಾಸಣೆಗೆ ಒಳಪಡಿಸಿದ್ದು, ಜೂ.8ರಂದು ಸೋಂಕು ತಗಲಿರುವುದು ದೃಢಪಟ್ಟಿತ್ತು. ಬಳಿಕ ಈತನ ಕುಟುಂಬದ 6 ಜನರಿಗೂ ಈತನಿಂದ ಸೋಂಕು ಹರಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ಹೊರ ರಾಜ್ಯಕ್ಕೆ ತೆರಳಿದ್ದಲ್ಲದೇ, ಆ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡದೆ ಕುಟುಂಬ 6 ಜನರಿಗೆ ಸೋಂಕು ಹರಡಿ, ಮಾನವರ ಆರೋಗ್ಯ ಸುರಕ್ಷತೆಗೆ ಅಪಾಯ ಉಂಟಾಗಲು ಕಾರಣನಾದ ಹಿನ್ನೆಲೆಯಲ್ಲಿ ಸಿರಾ ಪೆÇಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

About The Author

You May Also Like

More From Author

+ There are no comments

Add yours