ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಸ್ವಯಂ ಪ್ರೇರಿತ ಬಂದ್!

1 min read

 

 

 

 

 

ತುಮಕೂರು, (ಜೂ.22) tumkurnews.in

ಬೆಂಗಳೂರಿನಲ್ಲಿ ಚಿಕ್ಕಪೇಟೆ, ಚಾಮರಾಜಪೇಟೆ ಸೇರಿದಂತೆ ಪ್ರಮುಖ ಮಾರುಕಟ್ಟೆ ಪ್ರದೇಶಗಳನ್ನು ಸೀಲ್ ಡೌನ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಈ ನಡುವೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಕೂಡ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಸೋಮವಾರ ಗುಬ್ಬಿ ಪಟ್ಟಣದಲ್ಲಿ ಸಭೆ ನಡೆಸಿದ ವರ್ತಕರು ಸ್ವಯಂ ಪ್ರೇರಿತ ಬಂದ್ ಗೆ ನಿರ್ಧಾರ ಕೈಗೊಂಡಿದ್ದಾರೆ.
ವರ್ತಕರ ಸಂಘ, ಕಿರಾಣಿ ವರ್ತಕರ ಸಂಘ, ಫ್ಯಾನ್ಸಿ ಸ್ಟೋರ್ ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘದ ಪ್ರಮುಖರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಜೂನ್ 23 ರಿಂದ ಜುಲೈ 6ರ ವರೆಗೆ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಸಂಘದ ಮುಖಂಡರುಗಳು ತೀರ್ಮಾನಕ್ಕೆ ಬಂದಿದ್ದಾರೆಈ ಆದ್ದರಿಂದ ಸ್ವಯಂಪ್ರೇರಿತ ಬಂದ್ ಗೆ ಗುಬ್ಬಿ ಜನತೆ ಸ್ಪಂದಿಸಬೇಕಿದೆ.
ವರ್ತಕರು ತಮ್ಮ ನಿರ್ಧಾರವನ್ನು ಲಿಖಿತವಾಗಿ ತಹಶೀಲ್ದಾರ್ ರವರಿಗೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ದಯಾನಂದ ಮೂರ್ತಿ, ಭವರಲಾಲ್, ದತ್ತ ಕುಮಾರ್, ಸಂಕೇತ್, ಕೆ.ಎನ್ ರಮೇಶ್, ಕಾಂತರಾಜು, ಕುಮಾರ ಸ್ವಾಮಿ, ದುರ್ಗಾ ರಾಮ್, ಸೋಮಣ್ಣ,ವಿವೇಕ್ ಮುಂತಾದವರು ಭಾಗವಹಿಸಿದ್ದರು.
ಗುಬ್ಬಿ ತಾಲೂಕಿನಲ್ಲಿ ಈವರೆಗೆ ಎರಡು ಕೋವಿಡ್ 19 ಪ್ರಕರಣ ಕಂಡುಬಂದಿದೆ. ದೆಹಲಿಯಿಂದ ಎತ್ತಿನಹೊಳೆ ಕಾಮಗಾರಿಗೆ ಬಂದಿದ್ದ ವ್ಯಕ್ತಿ ಹಾಗೂ ಕಿಟ್ಟದಕುಪ್ಪೆ ಗ್ರಾಮದಲ್ಲಿ ಅಡುಗೆ ಕೆಲಸ ಮಾಡುವ ವ್ಯಕ್ತಿಗೆ ಸೋಂಕು ತಗಲಿದೆ. ಈ ಹಿನ್ನೆಲೆಯಲ್ಲಿ ಜನರು ಎಚ್ಚೆತ್ತುಕೊಂಡಿದ್ದಾರೆ.

You May Also Like

More From Author

+ There are no comments

Add yours