ತುಮಕೂರು: ಮಾರ್ಚ್ 1ರಂದು ಸಿಎಂ ಸಿದ್ದರಾಮಯ್ಯ‌ ಭೇಟಿ

1 min read

 

 

 

 

 

ಕುಣಿಗಲ್ ತಾಲ್ಲೂಕಿಗೆ ಮುಖ್ಯಮಂತ್ರಿ ಭೇಟಿ: ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

Tumkurnews
ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಮಾರ್ಚ್ 1ರಂದು ಮಧ್ಯಾಹ್ನ 1 ಗಂಟೆಗೆ ಕುಣಿಗಲ್ ನಗರದ ಜಿ.ಕೆ.ಬಿ.ಎಂ.ಎಸ್. ಮೈದಾನದಲ್ಲಿ ಕುಣಿಗಲ್ ತಾಲ್ಲೂಕು ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಅನುಮೋದನೆಗೊಂಡ ವಿವಿಧ ಕಾಮಗಾರಿಗಳ ಅನಾವರಣ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ತುಮಕೂರು: ಮಾರ್ಚ್ 1ರಿಂದ 22ರ ವರೆಗೆ ನಿಷೇದಾಜ್ಞೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್, ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ಸತೀಶ್ ಜಾರಕಿಹೊಳಿ, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ಎನ್.ಚೆಲುವರಾಯಸ್ವಾಮಿ, ಎಸ್.ಎಸ್.ಮಲ್ಲಿಕಾರ್ಜುನ್, ರಹೀಂ ಖಾನ್, ಕೆ. ವೆಂಕಟೇಶ್, ಶಿವರಾಜ್ ಸಂಗಪ್ಪ ತಂಗಡಗಿ, ಕೆ.ಎನ್.ರಾಜಣ್ಣ, ಸುರೇಶ್ ಬಿ.ಎಸ್., ಲಕ್ಷ್ಮಿ ಆರ್. ಹೆಬ್ಬಾಳ್ಕರ್, ಮಂಕಾಳ ವೈದ್ಯ, ಮಧು ಬಂಗಾರಪ್ಪ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್. ಶ್ರೀನಿವಾಸ್, ನವದೆಹಲಿಯ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ.ಜಯಚಂದ್ರ ಅವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದ್ದು, ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ತುಮಕೂರು: ಸೂರ್ಯೋದಯಕ್ಕೂ ಮುನ್ನವೇ ಜಿಲ್ಲಾಧಿಕಾರಿ ಹಾಜರ್! ಮನಸೋತ ಜನ
ಕಾಯಕ್ರಮದಲ್ಲಿ ಜಿಲ್ಲೆಯ ಸಂಸದರು, ಜಿಲ್ಲೆಯ ಶಾಸಕರು ಹಾಗೂ ಚುನಾಯಿತ ಜನಪ್ರತಿನಿಧಿಗಳು, ತುಮಕೂರು ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಅಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸುವರು.
ಉದ್ಘಾಟನೆಯಾಗಲಿರುವ ಕಾಮಗಾರಿಗಳ ವಿವರ:
ಕುಣಿಗಲ್‍ನಲ್ಲಿ 986 ಕೋಟಿ ರೂ. ವೆಚ್ಚದ ಕುಣಿಗಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರಪಳಿ (70 ಕಿ.ಮೀ. ನಿಂದ) ಕುಣಿಗಲ್ ತಾಲ್ಲೂಕಿನ ಕೆರೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿ, 130 ಕೋಟಿ ರೂ. ವೆಚ್ಚದ ಕುಣಿಗಲ್ ತಾಲ್ಲೂಕಿನ ಹೇಮಾವತಿ ಯೋಜನೆಯಡಿ ಬರುವ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿ, 351.68 ಕೋಟಿ ರೂ. ವೆಚ್ಚದ ಹುಲಿಯೂರುದುರ್ಗದಲ್ಲಿ 2 x 500 ಎಂ.ವಿ.ಎ. 400 x 220 ಕೆ.ವಿ. ಮತ್ತು 2 x 100 ಎಂ.ವಿ.ಎ. 220/66 ಕೆ.ವಿ. ಸಾಮಥ್ರ್ಯದ ವಿದ್ಯುತ್ ಪರಿವರ್ತಕಗಳ 400/220/66ಕೆ.ವಿ. ವಿದ್ಯುತ್ ಉಪಕೇಂದ್ರ ಮತ್ತು ಸಂಬಂಧಿಸಿದ 400 ಕೆ.ವಿ., 220 ಕೆ.ವಿ., 66 ಕೆ.ವಿ. ಪ್ರಸರಣ ಮಾರ್ಗಗಳು ಮತ್ತು 66 ಕೆ.ವಿ. ಟರ್ಮಿನಿಲ್ ಬೇ ಗಳ ನಿರ್ಮಾಣ ಕಾಮಗಾರಿ, 35ಕೋಟಿ ರೂ. ವೆಚ್ಚದ ಕುಣಿಗಲ್ ಪುರಸಭಾ ವ್ಯಾಪ್ತಿಯಲ್ಲಿ ಬಳಸಿದ ನೀರು ನಿರ್ವಹಣೆ ಯೋಜನೆ ಹಂತ 2ರಲ್ಲಿ ಒಳಚರಂಡಿ ವ್ಯವಸ್ಥೆಯ ನಿರ್ಮಾಣ, ಉನ್ನತೀಕರಣ ಕಾಮಗಾರಿ, 9.5ಕೋಟಿ ರೂ. ವೆಚ್ಚದ ಕುಣಿಗಲ್ ಪುರಸಭಾ ವ್ಯಾಪ್ತಿಯಲ್ಲಿ ವಾರ್ಡ್ ನಂ.12ರ ಬಿ.ಎಂ.ರಸ್ತೆಯಲ್ಲಿ ಪುರಸಭೆ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿ, 6 ಕೋಟಿ ರೂ. ವೆಚ್ಚದ ಕುಣಿಗಲ್ ಪುರಸಭೆಯ ಎಸ್.ಎಫ್.ಸಿ. ವಿಶೇಷ ಅನುದಾನ, 35.14 ಕೋಟಿ ರೂ. ವೆಚ್ಚ ಜಲಜೀವನ್ ಮಿಷನ್ ಯೋಜನೆಯಡಿ ಕುಣಿಗಲ್ ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಕಾಮಗಾರಿ, 10 ಕೋಟಿ ರೂ. ವೆಚ್ಚದ ನರೇಗಾ ಕಾರ್ಯಕ್ರಮದ ಅಡಿಯಲ್ಲಿ ಸಮಗ್ರ ಶಾಲಾ ಅಭಿವೃದ್ಧಿ ಕಾಮಗಾರಿಗಳು, 9.65 ಕೋಟಿ ರೂ. ವೆಚ್ಚದ ಕುಣಿಗಲ್ ತಾಲ್ಲೂಕು ಆಡಳಿತ ಸೌಧ ಕಟ್ಟಡ ಕಾಮಗಾರಿ, 23.25 ಲಕ್ಷ ರೂ. ವೆಚ್ಚದಲ್ಲಿ ಹುಲಿಯೂರುದುರ್ಗ ನಾಡ ಕಛೇರಿ ಕಾಮಗಾರಿ, 2.26 ಕೋಟಿ ರೂ. ವೆಚ್ಚದಲ್ಲಿ ಕುಣಿಗಲ್ ತಾಲ್ಲೂಕಿನ ನೂತನ ಅಗ್ನಿಶಾಮಕ ಠಾಣೆ ಉದ್ಘಾಟನೆ, 56.26 ಕೋಟಿ ರೂ. ವೆಚ್ಚದ 27 ರಸ್ತೆ ಕಾಮಗಾರಿಗಳಿಗೆ ಅನುಮೋದನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ತುಮಕೂರು: ಡಿವೈಎಸ್ಪಿ ಮೂಗಿಗೆ ಗಾಯ ಪ್ರಕರಣ: ಬಿಜೆಪಿ ಕಾರ್ಯಕರ್ತನ ಬಂಧನ: ಎಸ್.ಪಿ ಹೇಳಿದ್ದೇನು? ವಿಡಿಯೋ

You May Also Like

More From Author

+ There are no comments

Add yours