ಒಂದೇ ದಿನ 4 ಜನರಿಗೆ ಪಾಸಿಟಿವ್, ಅರ್ಧ ಶತಕ ಭಾರಿಸಿದ ಕೋವಿಡ್ 19

1 min read

 

 

 

 

 

ತುಮಕೂರು, ಜೂ.20 tumkurnews.in:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ತುಮಕೂರು ನಗರ, ಗ್ರಾಮಾಂತರ, ತಿಪಟೂರಿನಲ್ಲಿ ತಲಾ ಒಂದೊಂದಂತೆ ಜಿಲ್ಲೆಯಲ್ಲಿ ಶನಿವಾರ ನಾಲ್ಕು ಜನರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ.

ನೆಲಮಂಗಲ ತಾಲ್ಲೂಕಿನ ಸೋಂಕಿತ ವ್ಯಕ್ತಿಯ ಪ್ರಥಮ ಸಂಪರ್ಕದಲ್ಲಿದ್ದ ಟಿಎಂಕೆ 47 ಎಂಬ 52 ವರ್ಷದ ಮಹಿಳೆಯನ್ನು  ಪರೀಕ್ಷೆಗೆ ಒಳಪಡಿಸಲಾಗಿತ್ತು, ಇವರಿಗೆ ಸೋಂಕು ದೃಢವಾಗಿದೆ.

ಎರಡನೇ ಪ್ರಕರಣದಲ್ಲಿ ತಿಪಟೂರು ನಿವಾಸಿ 65 ವರ್ಷದ ಮಹಿಳೆಯಲ್ಲಿ(ಟಿಎಂಕೆ 48) ಸೋಂಕು ಪತ್ತೆಯಾಗಿದೆ. ಈಕೆ ಜೂ.16 ರಂದು ತಮಿಳುನಾಡಿಗೆ ಹೋಗಿ ಬಂದಿದ್ದರು, ಜೂ.17 ರಂದು ನಡೆಸಿದ ಪರೀಕ್ಷೆಯಲ್ಲಿ ಸೋಂಕು ಕಂಡು ಬಂದಿದೆ.
ಮೂರನೇ ಪ್ರಕರಣದಲ್ಲಿ ತುಮಕೂರು ಗ್ರಾಮಾಂತರ ಪ್ರದೇಶದ(ಟಿಎಂಕೆ 49) ಎಂಬ 26 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ.

ನಾಲ್ಕನೇ ಪ್ರಕರಣದಲ್ಲಿ ವಿದೇಶದಿಂದ ತುಮಕೂರು ನಗರಕ್ಕೆ ಬಂದಿರುವ 25 ವರ್ಷ ವಯಸ್ಸಿನ (ಟಿಎಂಕೆ 50) ಯುವಕನಲ್ಲಿ ಕೋವಿಡ್ ಪತ್ತೆಯಾಗಿದೆ.

ಈ ಎಲ್ಲರನ್ನೂ ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರುಗಳು ವಾಸವಿದ್ದ ಪ್ರದೇಶವನ್ನು ಕಂಟೋನ್ಮೆಂಟ್ ಜೋನ್ ಮಾಡಲಾಗಿದೆ. ಇವರುಗಳ ಪ್ರಥಮ ಮತ್ತು ದ್ವಿತೀಯ ಹಂತದ ಸಂಪರ್ಕ ಹೊಂದಿದ್ದವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 50 ಕ್ಕೆ ಏರಿಕೆಯಾಗಿದ್ದು, 17 ಮಂದಿ ಆಸಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 31 ಜನ ಗುಣಮುಖರಾಗಿದ್ದಾರೆ, ಇಬ್ಬರು ಸಾವನ್ನಪ್ಪಿದ್ದಾರೆ.

You May Also Like

More From Author

+ There are no comments

Add yours