ಶಾಲಾ ಕಟ್ಟಡಗಳಿಗೆ ಶಂಕು ಸ್ಥಾಪನೆ ಮಾಡಿ ಮಾತು ಉಳಿಸಿಕೊಂಡಿದ್ದೇನೆ; ಶಾಸಕ ಡಿ.ಸಿ.ಗೌರಿಶಂಕರ್

0 min read

 

 

 

 

 

ತುಮಕೂರು ನ್ಯೂಸ್.ಇನ್(ಜೂ.18)
ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ತಾಲ್ಲೂಕಿನ 12 ಗ್ರಾಮಗಳಲ್ಲಿ ಸುಮಾರು 2.50 ಕೋಟಿ ರೂ.ವೆಚ್ಚದಲ್ಲಿ 23 ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಶಾಸಕ ಡಿ.ಸಿ ಗೌರಿಶಂಕರ್ ತಿಳಿಸಿದರು.
ತಾಲ್ಲೂಕಿನ ಕರೆಕಲ್ ಪಾಳ್ಯ, ವಡ್ಡರಹಳ್ಳಿ, ಬೀರನಕಲ್, ಸ್ವಾಂದೇನಹಳ್ಳಿ, ಅಜ್ಜಗೊಂಡನಹಳ್ಳಿ, ಚಿಕ್ಕಶೀಬಿ, ಬೆಳ್ಳಾವಿ, ಚಿಕ್ಕಬೆಳ್ಳಾವಿ, ಚಿಕ್ಕನಾರವಂಗಲ, ಮಲ್ಲಸಂದ್ರ ಪಾಳ್ಯ, ಆಗಳಕೋಟೆ, ಗೂಳರಿವೆ ಮತ್ತು ನಾಗವಲ್ಲಿ ಶಾಲಾ ಕಟ್ಟಡಗಳಿಗೆ ಗುರುವಾರ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂದು ಗುರುವಾರ ತಾಲ್ಲೂಕಿನ 12 ಗ್ರಾಮಗಳ 2.50 ಕೋಟಿ ರೂ.ವೆಚ್ಚದ ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೂ ಆಧ್ಯತೆ ನೀಡಲಾಗಿದೆ. ಇನ್ನು ಮೂರು ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಜನಸೇವಕನಾಗಿ ಕೆಲಸ ಮಾಡುವೆ: ಸ್ವಾಂದೇನಹಳ್ಳಿ ಗ್ರಾಮದಲ್ಲಿ ಈಗಾಗಲೇ 2 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳು ನಡೆದಿವೆ. ಈ ಗ್ರಾಮದಲ್ಲಿ ಇನ್ನು ಒಂದೇ ಒಂದು ರಸ್ತೆ ಅಭಿವೃದ್ಧಿಪಡಿಸಬೇಕಿದೆ. ಆ ರಸ್ತೆ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಸರ್ಕಾರದಿಂದ ಅನುಮತಿ ಸಿಕ್ಕ ನಂತರ ಆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಒಟ್ಟಾರೆ 4 ಕೋಟಿ ರೂ.ವೆಚ್ಚದಲ್ಲಿ ಸ್ವಾಂದೇನಹಳ್ಳಿ ಗ್ರಾಮ ಸಂಪೂರ್ಣ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.
ನಾನು ಚುನಾವಣಾ ಪೂರ್ವದಲ್ಲಿ ಸ್ವಾಂದೇನಹಳ್ಳಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ್ಲ ಗ್ರಾಮಸ್ಥರಿಗೆ ಕೊಟ್ಟಂತಹ ಭರವಸೆಗಳನ್ನು ಈಡೇರಿಸುತ್ತಿದ್ದೇನೆ. ಇನ್ನೂ 3 ವರ್ಷಗಳ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಗ್ರಾಮಾಂತರದಲ್ಲಿ ಯಾವುದೇ ಸಮಸ್ಯೆಗಳು ಬಾರದಂತೆ ಜನಸೇವಕನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ: ಗ್ರಾಮಾಂತರದಲ್ಲಿ ಹಲವಾರು ಶಾಲೆಗಳು ದುರಸ್ಥಿ ಹಂತದಲ್ಲಿವೆ. ಚುನಾವಣೆಗೂ ಮುನ್ನ ನೂತನ ಕೊಠಡಿಗಳನ್ನು ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರು ಮತ್ತು ಮಕ್ಕಳ ಪೋಷಕರು ಮನವಿ ಮಾಡಿದ್ದರು. ಚುನಾವಣೆಯಲ್ಲಿ ಗೆದ್ದ ನಂತರ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಮಸ್ಥರಿಗೆ ಕೊಟ್ಟ ಭರವಸೆಯಂತೆ ಇಂದು 12 ಗ್ರಾಮಗಳ ಸರ್ಕಾರಿ ಶಾಲೆಗಳ ನೂತನ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇದ್ದರೂ ಅದನ್ನು ನಾನು ಬಗೆಹರಿಸುತ್ತೇನೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಭರವಸೆ ನೀಡಿದರು.
12 ಗ್ರಾಮಗಳಲ್ಲಿ ಶಂಕುಸ್ಥಾಪನೆ: ತಾಲ್ಲೂಕಿನ ಬೆಳ್ಳಾವಿ ಸರ್ಕಾರಿ ಶಾಲೆಯ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ 44 ಲಕ್ಷ ರೂ, ನಾಗವಲ್ಲಿ ಸರ್ಕಾರಿ ಶಾಲೆಯ 4 ಕೊಠಡಿಗಳ ನಿರ್ಮಾಣಕ್ಕೆ 44 ಲಕ್ಷ ರೂ, ಗೂಳರಿವೆ ಸರ್ಕಾರಿ ಪ್ರಾಥಮಿಕ ಶಾಲೆಯ 4 ಕೊಠಡಿಗಳ ನಿರ್ಮಾಣಕ್ಕೆ 44 ಲಕ್ಷ ರೂ., ಮಲ್ಲಸಂದ್ರಪಾಳ್ಯ ಸರ್ಕಾರಿ ಶಾಲೆಯ 3 ಕೊಠಡಿಗಳಿಗೆ 33 ಲಕ್ಷ ರೂ., ಚಿಕ್ಕನಾರವಂಗಲ ಸರ್ಕಾರಿ ಶಾಲೆಯ ಎರಡು ಕೊಠಡಿಗಳ ನಿರ್ಮಾಣಕ್ಕೆ 22 ಲಕ್ಷ ರೂ., ಮತ್ತು ಕರೇಕಲ್ ಪಾಳ್ಯ, ಬೀರನಕಲ್ಲು, ಸ್ವಾಂದೇನಹಳ್ಳಿ, ಅಜ್ಜಗೊಂಡನಹಳ್ಳಿ, ಚಿಕ್ಕಸೀಬಿ, ಚಿಕ್ಕಬೆಳ್ಳಾವಿ ಸರ್ಕಾರಿ ಶಾಲೆಗಳ ತಲಾ 11 ಲಕ್ಷ ರೂ.ಗಳಲ್ಲಿ ಒಂದೊಂದು ಕೊಠಡಿ ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಒಟ್ಟಾರೆ 2.53 ಕೋಟಿ ರೂ.ವೆಚ್ಚದಲ್ಲಿ 23 ಕೊಠಡಿಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆವತಿಯಿಂದ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಸ್ವಾಂದೇನಹಳ್ಳಿಯಲ್ಲಿ ನಿಧನರಾದ ಜೆಡಿಎಸ್ ಕಾರ್ಯಕರ್ತ ರಂಗಸ್ವಾಮಯ್ಯ ಅವರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಕುಟುಂಬಕ್ಕೆ 25 ಸಾವಿರ ರೂ.ಗಳ ಧನ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಎಇಇ ಹರೀಶ್, ಎಇ ಮಂಜುನಾಥ್, ಭಾಗ್ಯವತಿ, ಗೂಳೂರು, ಊರ್ಡಿಗೆರೆ, ಊರುಕೆರೆ, ಬೆಳ್ಳಾವಿ, ಹೆಗ್ಗೆರೆ ಪಂಚಾಯಿತಿ ಜೆಡಿಎಸ್ ಉಸ್ತುವಾರಿಗಳು ಹಾಗೂ ಜೆಡಿಎಸ್ ಮುಖಂಡರುಗಳು ಭಾಗವಹಿಸಿದ್ದರು.

You May Also Like

More From Author

+ There are no comments

Add yours