ತುಮಕೂರು: ಡಿ.8ಕ್ಕೆ ಪಾಲಿಕೆ ವ್ಯಾಪ್ತಿಯಲ್ಲಿ ತ್ವರಿತ ಸೇವೆ ಅದಾಲತ್

1 min read

 

 

 

 

 

ಡಿ.8ರಂದು ತ್ವರಿತ ಸೇವೆ ಅದಾಲತ್

Tumkurnews
ತುಮಕೂರು: ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿ, ಕಟ್ಟಡ ಮಾಲೀಕರಿಗೆ ಪಾಲಿಕೆ ಆಡಳಿತ ಕಚೇರಿ ಆವರಣದಲ್ಲಿ ದಿನಾಂಕ: 08.12.2023 ಶುಕ್ರವಾರದಂದು ಬೆಳಿಗ್ಗೆ: 9.30 ರಿಂದ ಸಂಜೆ 05.30 ಗಂಟೆವರೆಗೆ ‘ತ್ವರಿತ ಸೇವೆ ಅದಾಲತ್’ ಹಮ್ಮಿಕೊಳ್ಳಲಾಗಿದೆ.
ನಮೂನೆ-2, ನಮೂನೆ -3ರಲ್ಲಿ ಆಸ್ತಿಗಳ ಅಳತೆಯ ಅದಲು-ಬದಲು, ಹೆಸರು ತಿದ್ದುಪಡಿ, ವಿಳಾಸ ತಿದ್ದುಪಡಿ ಹಾಗೂ ಇತರೆ ಲಿಪಿಕ ತಪ್ಪುಗಳ ತಿದ್ದುಪಡಿ, ಅನಧಿಕೃತ ಯುಜಿಡಿ ಸಂಪರ್ಕಗಳನ್ನು ಅಧಿಕೃತಗೊಳಿಸುವುದು ಮತ್ತು ಪಿಐಡಿ ಜೋಡಣೆ, ಅನಧಿಕೃತ ನೀರು ಸಂಪರ್ಕಗಳನ್ನು ಅಧಿಕೃತಗೊಳಿಸುವುದು ಮತ್ತು ಪಿಐಡಿ ಜೋಡಣೆ, ಚುನಾವಣಾ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಸ್ಥಳಾಂತರ, ಹೆಸರು ತಿದ್ದುಪಡಿ, ವಿಳಾಸ ತಿದ್ದುಪಡಿ, ಜನನ ಮರಣ ಪ್ರಮಾಣ ಪತ್ರಗಳಲ್ಲಿ ಹೆಸರು ಸೇರ್ಪಡೆ ಹಾಗೂ ಲಿಪಿಕ ತಪ್ಪುಗಳ ತಿದ್ದುಪಡಿ ಕುರಿತು ತ್ವರಿತ ಸೇವೆ ಅದಾಲತ್ ಹಮ್ಮಿಕೊಂಡಿದ್ದು, ಸಾರ್ವಜನಿಕರು ಸೂಕ್ತ ದಾಖಲೆಗಳೊಂದಿಗೆ ಆಗಮಿಸಿ ಈ ವಿಶೇಷ ಅಭಿಯಾನವನ್ನು ಸದುಪಯೋಗಪಡಿಸಿಕೊಳ್ಳಲು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

ತುಮಕೂರು ಮಹಾನಗರ ಪಾಲಿಕೆಯಲ್ಲಿ‌ ಖಾಲಿ‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾ‌ನ

You May Also Like

More From Author

+ There are no comments

Add yours