ಶಿರಾ ನಗರಸಭೆ, ಮಧುಗಿರಿ ಪುರಸಭೆಗೆ ಚುನಾವಣೆ: ವೇಳಾಪಟ್ಟಿ ಬಿಡುಗಡೆ

1 min read

 

 

 

 

 

ವಿವಿಧ ವಾರ್ಡ್‍ಗಳ ಉಪಚುನಾವಣೆ: ವೇಳಾಪಟ್ಟಿ ಪ್ರಕಟ

Tumkurnews
ತುಮಕೂರು: ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯ ಶಿರಾ ನಗರಸಭೆಯ ವಾರ್ಡ್ ನಂಬರ್ 09 ಮತ್ತು ಮಧುಗಿರಿ ಪುರಸಭೆ ವಾರ್ಡ್ ನಂಬರ್ 13ರಲ್ಲಿ ಕೌನ್ಸಿಲರನ್ನು ಚುನಾಯಿಸುವ ಸಂಬಂಧ ಉಪಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಅಪಹರಣ!: ಸಿಸಿ ಟಿವಿಯಲ್ಲಿರುವ ಮಹಿಳೆಯರಿಗಾಗಿ ತಲಾಶ್!
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ ಡಿಸೆಂಬರ್ 8, 2023 ಶುಕ್ರವಾರ, ನಾಮಪತ್ರ ಸಲ್ಲಿಸಲು ಡಿಸೆಂಬರ್ 15 ಕಡೆಯ ದಿನ, ನಾಮಪತ್ರ ಪರಿಶೀಲನೆ ಡಿಸೆಂಬರ್ 16, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 18 ಕಡೆಯದಿನ. ಮತದಾನ ಅವಶ್ಯವಿದ್ದರೆ ಡಿಸೆಂಬರ್ 27ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನವಿದ್ದಲ್ಲಿ ಡಿಸೆಂಬರ್ 29ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ, ಮತ ಎಣಿಕೆ ಡಿಸೆಂಬರ್ 30ರಂದು ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ ಹಾಗೂ ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನ ಡಿಸೆಂಬರ್ 30 ಶನಿವಾರ.

ತುಮಕೂರು ಮಹಾನಗರ ಪಾಲಿಕೆಯಲ್ಲಿ‌ ಖಾಲಿ‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾ‌ನ
ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ವ್ಯಾಪ್ತಿಯಲ್ಲಿ ಡಿಸೆಂಬರ್ 8 ರಿಂದ ಸದಾಚಾರ ಸಂಹಿತೆಯು ಜಾರಿಗೆ ಬರಲಿದ್ದು, ಚುನಾವಣೆ ಮುಕ್ತಾಯಗೊಳ್ಳುವ ಡಿಸೆಂಬರ್ 30ರವರೆಗೆ ಜಾರಿಯಲ್ಲಿರುತ್ತದೆ. ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಸದಾಚಾರ ಸಂಹಿತೆಯು ಯಾವುದೇ ರೀತಿಯಲ್ಲಿ ಉಲ್ಲಂಘನೆಯಾಗದಂತೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ರೈಲಿಗೆ ಸಿಲುಕಿ ಚಿರತೆ ಸಾವು; ವಿಡಿಯೋ

You May Also Like

More From Author

+ There are no comments

Add yours