ತುಮಕೂರು ಮಹಾನಗರ ಪಾಲಿಕೆಯಲ್ಲಿ‌ ಖಾಲಿ‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾ‌ನ

1 min read

 

 

 

 

 

ತುಮಕೂರು ಮಹಾನಗರ ಪಾಲಿಕೆಯಲ್ಲಿ‌ ಖಾಲಿ‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾ‌ನ

Tumkurnews
ತುಮಕೂರು: ಮಹಾನಗರ ಪಾಲಿಕೆಯಲ್ಲಿ 5 ಸಮುದಾಯ ಸಂಪನ್ಮೂಲ ಹುದ್ದೆಗಳ ಪೈಕಿ ಈಗಾಗಲೇ 3 ಹುದ್ದೆಗಳು ಭರ್ತಿಯಾಗಿದ್ದು, ಇನ್ನು ಉಳಿದಿರುವ ಎರಡು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಗೃಹರಕ್ಷಕ ದಳದಲ್ಲಿ ಕೆಲಸ: ಎಸ್ಸೆಲ್ಸಿ ಆದವರು ಇಂದೇ ಅರ್ಜಿ ಹಾಕಿ!
ಮಹಾನಗರ ಪಾಲಿಕೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಡೇ-ನಲ್ಮ್ ಯೋಜನೆಯ ಉಪಘಟಕವಾದ ಸಾಮಾಜಿಕ ಕ್ರೊಢಿಕರಣ ಮತ್ತು ಸಾಂಸ್ಥಿಕ ಅಭಿವೃದ್ದಿ ಕಾರ್ಯಕ್ರಮದ ಸ್ವ-ಸಹಾಯ ಗುಂಪುಗಳು ಘಟಕದಡಿ ಸದಸ್ಯತ್ವ ಹೊಂದಿರುವ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ದ್ವಿತೀಯ ಪಿ.ಯು.ಸಿ ವಿದ್ಯಾರ್ಹತೆ ಹೊಂದಿರಬೇಕು, ಕಂಪ್ಯೂಟರ್ ಬಳಕೆ ಹಾಗೂ ಸ್ವ ಸಹಾಯ ಸಂಘದಿಂದ ಸದಸ್ಯತ್ವ ಹೊಂದಿರಬೇಕು.
ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 12, 2023ರೊಳಗಾಗಿ ಆಯುಕ್ತರು, ಮಹಾನಗರಪಾಲಿಕೆ, ತುಮಕೂರು ಇವರಿಗೆ ಸಲ್ಲಿಸಬಹುದಾಗಿದೆ ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಅಪಹರಣ!: ಸಿಸಿ ಟಿವಿಯಲ್ಲಿರುವ ಮಹಿಳೆಯರಿಗಾಗಿ ತಲಾಶ್!

You May Also Like

More From Author

+ There are no comments

Add yours