ಬೆಂಗಳೂರು: ಎಚ್ಎಎಲ್(HAL)ನಿಂದ ಅರ್ಜಿ ಆಹ್ವಾನ

1 min read

 

 

 

 

 

ಹೆಚ್ಎಎಲ್’ನಿಂದ ಅರ್ಜಿ ಆಹ್ವಾನ

ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‍ಎಎಲ್) ಬೆಂಗಳೂರು ಇಲ್ಲಿ ಐಟಿಐ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗಾಗಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ.ಯಲ್ಲಿ ಶೇ.70, ಐಟಿಐ(ಸಿಟಿಎಸ್) ಶೇ.30 ಅಂಕ ಪಡೆದ ಫಿಟ್ಟರ್, ಟರ್ನರ್, ಮಷಿನಿಸ್ಟ್, ಎಲೆಕ್ಟ್ರೀಷಿಯನ್, ವೆಲ್ಡರ್, ಸಿಒಪಿಎ, ಫೌಂಡ್ರಿಮನ್, ಶೀಟ್ ಮೆಟಲ್ ವರ್ಕರ್, ಕಾರ್ಪೆಂಟರ್, ಟೂಲ್ & ಡೈ ಮೇಕರ್, ಮೆಕಾನಿಕ್ ಅರ್&ಎಸಿ ಅಡ್ವಾನಸ್ಡ್ ಸಿಎನ್‍ಸಿ ಮಷನಿಂಗ್, ಕ್ರಾಫ್ಟ್ಸ್‍ಮನ್ ಟ್ರೈನಿಂಗ್ ಸ್ಕೀಮ್ ಸಿಟಿಎಸ್ ಇವುಗಳಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ದಿ: 30-12-2023 ಕಡೆಯ ದಿನವಾಗಿರುತ್ತದೆ.

ಗೃಹರಕ್ಷಕ ದಳದಲ್ಲಿ ಕೆಲಸ: ಎಸ್ಸೆಲ್ಸಿ ಆದವರು ಇಂದೇ ಅರ್ಜಿ ಹಾಕಿ!
ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್, ಪೋರ್ಟಲ್ ರಿಜಿಸ್ಟ್ರೇಷನ್ ಸಂಖ್ಯೆ, ಎಂಪ್ಲಾಯ್‍ಮೆಂಟ್ ಕಾರ್ಡ್, ಪಾಸ್‍ಪೋರ್ಟ್ ಸೈಜಿನ 4 ಪೋಟೋಗಳು ಈ ಎಲ್ಲಾ ದಾಖಲೆಗಳ ಮೂಲ ಪ್ರತಿ ಹಾಗೂ 2 ಸೆಟ್ ಜೆರಾಕ್ಸ್ ಪ್ರತಿಯನ್ನು ನೇರವಾಗಿ ತಾಂತ್ರಿಕ ತರಬೇತಿ ಸಂಸ್ಥೆ, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ., ಸುರಂಜನ್ ದಾಸ್ ರಸ್ತೆ, ವಿಮಾನಪುರ ಅಂಚೆ, ಬೆಂಗಳೂರು-560017 ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ, ದೂ.ಸಂ: 08182-255293, 9482023412 ಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಅಪಹರಣ!: ಸಿಸಿ ಟಿವಿಯಲ್ಲಿರುವ ಮಹಿಳೆಯರಿಗಾಗಿ ತಲಾಶ್!

You May Also Like

More From Author

+ There are no comments

Add yours